ADVERTISEMENT

ಪೆಶಾವರ ಸ್ಫೋಟ ಪ್ರಕರಣದ ಹೊಣೆ ಹೊತ್ತ ಐಎಸ್‌

ಏಜೆನ್ಸೀಸ್
Published 5 ಮಾರ್ಚ್ 2022, 8:20 IST
Last Updated 5 ಮಾರ್ಚ್ 2022, 8:20 IST
ಸ್ಫೋಟ ಸಂಭವಿಸಿದ ಪೆಶಾವರದ ಶಿಯಾ ಮಸೀದಿ (ರಾಯಿಟರ್ಸ್‌ ಚಿತ್ರ)
ಸ್ಫೋಟ ಸಂಭವಿಸಿದ ಪೆಶಾವರದ ಶಿಯಾ ಮಸೀದಿ (ರಾಯಿಟರ್ಸ್‌ ಚಿತ್ರ)   

ಪೆಶಾವರ (ಪಾಕಿಸ್ತಾನ): ವಾಯುವ್ಯ ಪಾಕಿಸ್ತಾನದ ನಗರ ಪೆಶಾವರದಲ್ಲಿನ ಶಿಯಾ ಮಸೀದಿಯೊಂದರಲ್ಲಿ ಶುಕ್ರವಾರ ಸಂಭವಿಸಿದ ಆತ್ಮಾಹುತಿ ಬಾಂಬ್‌ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಹೊತ್ತಿದೆ.

ಘಟನೆಯಲ್ಲಿ ಕನಿಷ್ಠ 56 ಜನರು ಮೃತಪಟ್ಟಿದ್ದು, 194 ಮಂದಿ ತೀವ್ರವಾಗಿ ಗಾಯಗೊಂಡಿದ್ದರು.

ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಮಸೀದಿಯೊಳಗೆ ಏಕಾಂಗಿಯಾಗಿ ತೆರಳಿದ ಅಫ್ಗಾನಿಸ್ತಾನದ ಆತ್ಮಾಹುತಿ ಬಾಂಬ್ ದಾಳಿಕೋರ ಈ ಕೃತ್ಯ ನಡೆಸಿದ್ದ ಎಂದು ಇಸ್ಲಾಮಿಕ್ ಸ್ಟೇಟ್ ತಿಳಿಸಿದೆ.

ADVERTISEMENT

ಅಫ್ಗಾನಿಸ್ತಾನದ ಖುರಾಸನ್ ಪ್ರಾಂತ್ಯದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಘಟಕವು ಈ ಕೃತ್ಯ ನಡೆಸಿರುವುದಾಗಿ ಹೇಳಿದೆ.

ಐಎಸ್‌ನೊಂದಿಗೆ ನಂಟು ಹೊಂದಿರುವ ‘ಅಮಾಕ್ ನ್ಯೂಸ್ ಏಜೆನ್ಸಿ’ಯ ಮೂಲಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ದಾಳಿಕೋರ ಅಫ್ಗನ್‌ ಆಗಿದ್ದ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದ್ದು, ಅತನ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.