ADVERTISEMENT

ಕಾಬೂಲ್‌: ಬಾಂಬ್‌ ದಾಳಿ ಹೊಣೆ ಹೊತ್ತುಕೊಂಡ ಐಎಸ್‌

ಏಜೆನ್ಸೀಸ್
Published 12 ಜನವರಿ 2023, 13:32 IST
Last Updated 12 ಜನವರಿ 2023, 13:32 IST
ಅಫ್ಗಾನಿಸ್ತಾನದ ವಿದೇಶಾಂಗ ಸಚಿವಾಲಯದ ಬಳಿ ಬಾಂಬ್‌ ಸ್ಫೋಟಗೊಂಡ ಸ್ಥಳ –ಎಎಫ್‌ಪಿ ಚಿತ್ರ
ಅಫ್ಗಾನಿಸ್ತಾನದ ವಿದೇಶಾಂಗ ಸಚಿವಾಲಯದ ಬಳಿ ಬಾಂಬ್‌ ಸ್ಫೋಟಗೊಂಡ ಸ್ಥಳ –ಎಎಫ್‌ಪಿ ಚಿತ್ರ   

ಕಾಬೂಲ್‌: ಕಾಬೂಲ್‌ನ ವಿದೇಶಾಂಗ ಸಚಿವಾಲಯದ ಬಳಿ ಬುಧವಾರ ಸಂಭವಿಸಿದ ಬಾಂಬ್‌ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಸಂಘಟನೆ ಗುರುವಾರ ಹೊತ್ತುಕೊಂಡಿದೆ.

ಈ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಐದು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದರು.

ವಿದೇಶಾಂಗ ಸಚಿವಾಲಯದಲ್ಲಿ ರಾಜತಾಂತ್ರಿಕರಿಗೆ ತರಬೇತಿ ನೀಡಲಾಗುತ್ತಿತ್ತು. ಸಚಿವಾಲಯದ ಪ್ರಧಾನ ದ್ವಾರದ ಬಳಿಯೇ ಈ ಸ್ಫೋಟ ಸಂಭವಿಸಿದ್ದು, ಇಲಾಖೆಯ ಸಿಬ್ಬಂದಿಯೇ ಗುರಿಯಾಗಿದ್ದರು ಎಂದು ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.