ADVERTISEMENT

ಐಎಸ್‌ಐ ಮುಖ್ಯಸ್ಥರ ನೇಮಕ: ವಾರದಲ್ಲಿ ಇತ್ಯರ್ಥ- ಪಾಕಿಸ್ತಾನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 10:59 IST
Last Updated 16 ಅಕ್ಟೋಬರ್ 2021, 10:59 IST
ಶೇಖ್‌ ರಶೀದ್‌ ಅಹ್ಮದ್‌
ಶೇಖ್‌ ರಶೀದ್‌ ಅಹ್ಮದ್‌   

ಇಸ್ಲಾಮಾಬಾದ್‌:ಐಎಸ್‌ಐನ ಹೊಸ ಮುಖ್ಯಸ್ಥರ ನೇಮಕಾತಿಗೆ ಸಂಬಂಧಿಸಿದ ಸಮಸ್ಯೆಯನ್ನು ಒಂದು ವಾರದೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಪಾಕಿಸ್ತಾನ ಆಂತರಿಕ ಸಚಿವ ಶೇಖ್‌ ರಶೀದ್‌ ಅಹ್ಮದ್‌ ಹೇಳಿದ್ದಾರೆ.

ನೇಮಕಾತಿ ವಿಷಯದಲ್ಲಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಸೇನಾ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಜ್ವಾ ನಡುವೆ ಮುಸುಕಿನ ಗುದ್ದಾಟವಿರುವ ಬಗ್ಗೆ ವದಂತಿಗಳ ನಡುವೆಯೇ ಸಚಿವ ರಶೀದ್‌ ಅಹ್ಮದ್ ಈ ಹೇಳಿಕೆ ನೀಡಿದ್ದಾರೆ.‌

ಲೆಫ್ಟಿನೆಂಟ್‌ ಜನರಲ್‌ ನದೀಮ್‌ ಅಹ್ಮದ್‌ ಅಂಜುಮ್‌ ಅವರ ನೇಮಕಾತಿ ಕುರಿತ ಅಧಿಸೂಚನೆ ಬಿಡುಗಡೆ ಮಾಡುವುದು ವಿಳಂಬವಾಗಿದೆ. ಹೀಗಾಗಿ ಐಎಸ್‌ಐ ಮಹಾನಿರ್ದೇಶಕರ ನೇಮಕಾತಿ ವಿಷಯವು ಸುದ್ದಿಯಲ್ಲಿದೆ.

ADVERTISEMENT

ನೇಮಕಾತಿ ವಿಳಂಬಕ್ಕೆ ಕಾರಣ ನೀಡಲು ಸಚಿವ ರಶೀದ್ ಅಹ್ಮದ್‌ ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.