ADVERTISEMENT

ಗಾಜಾದಲ್ಲಿ ವೈಮಾನಿಕ ದಾಳಿ: ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2022, 14:14 IST
Last Updated 6 ಆಗಸ್ಟ್ 2022, 14:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗಾಜಾ:‌ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, ಈ ಪ್ರದೇಶದಲ್ಲಿ ಭಯದ ವಾತಾವರಣ ಉಂಟಾಗಿದೆ.

ಉಗ್ರಗಾಮಿಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಜೆಟ್‌ಗಳು ಶನಿವಾರ ಗಾಜಾದಲ್ಲಿ ದಾಳಿ ನಡೆಸಿದರೆ, ದಕ್ಷಿಣ ಇಸ್ರೇಲ್ ಮೇಲೆ ರಾಕೆಟ್‌ ದಾಳಿ ಮುಂದುವರಿದಿದೆ. ಶುಕ್ರವಾರದ ದಾಳಿಯಲ್ಲಿ ಗಾಜಾ ಕಮಾಂಡರ್‌ ತೈಸೀರ್ ಅಲ್–ಜಬಾರಿ ಮೃತಪಟ್ಟಿದ್ದರಿಂದ ಗಾಜಾ ಪಟ್ಟಿಯ ಸುತ್ತಲಿನ ರಸ್ತೆಗಳನ್ನು ಇಸ್ರೇಲ್‌ ಬಂದ್‌ ಮಾಡಿದೆ.

ಇಸ್ರೇಲ್ ಯುದ್ಧ ವಿಮಾನಗಳು ಮಧ್ಯಾಹ್ನ ವೈಮಾನಿಕ ದಾಳಿ ಹೆಚ್ಚಿಸಿದವು. ದೂರವಾಣಿ ಕರೆಗಳ ಮೂಲಕ ನಿವಾಸಿಗಳಿಗೆ ಎಚ್ಚರಿಕೆ ನೀಡಿದ ನಂತರ, ಯುದ್ದ ವಿಮಾನಗಳು ಗಾಜಾ ನಗರದ ವಸತಿ ಪ್ರದೇಶದಲ್ಲಿ ಇಸ್ಲಾಮಿಕ್‌ ಜಿಹಾದ್‌ ಸದಸ್ಯ ನಿವಾಸದ ಮೇಲೆ ಎರಡು ಬಾಂಬ್‌ಗಳನ್ನು ಹಾಕಿದವು.

ADVERTISEMENT

ಎರಡು ಅಂತಸ್ತಿನ ಕಟ್ಟಡ ನೆಲಸಮಗೊಂಡಿತ್ತು. ಸುತ್ತಮುತ್ತಲಿನ ಮನೆಗಳಿಗೂ ಹಾನಿಯಾಯಿತು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮಾಸ್ಕೊ: ಗಾಜಾ ಪಟ್ಟಿಯಲ್ಲಿ ಸಂಯಮ ಕಾಪಾಡುವಂತೆ ರಷ್ಯಾ ಕರೆ ನೀಡಿದೆ.

‘ಘಟನೆಗಳು ಹೇಗೆ ವಿಕಸನಗೊಳ್ಳುತ್ತಿವೆ ಎಂಬುದನ್ನು ಆತಂಕದಿಂದ ಗಮನಿಸುತ್ತಿದ್ದೇವೆ. ಹೆಚ್ಚಿನ ಸಂಯಮ ತೋರಿಸಬೇಕು’ ಎಂದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಆಗಸ್ಟ್‌ 5ರಂದು ಇಸ್ರೇಲ್ ಸೇನೆ ಗಾಜಾ ಪಟ್ಟಿಗೆ ಗುಂಡು ಹಾರಿಸಿದ್ದರಿಂದ ಸಂಘರ್ಷ ಉಂಟಾಯಿತು. ಇಸ್ರೇಲ್‌ ಪ್ರದೇಶದ ಮೇಲೆ ಬಾಂಬ್ ದಾಳಿ ನಡೆಸುವ ಮೂಲಕ ಪ್ಯಾಲೇಸ್ಟಿನ್‌ ಪ್ರತೀಕಾರ ತೀರಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.