ADVERTISEMENT

ಇಸ್ರೇಲ್‌‌ನಲ್ಲಿ ಪತ್ತೆಯಾದ ದಕ್ಷಿಣ ಆಫ್ರಿಕಾದ ಅಪಾಯಕಾರಿ ಕೋವಿಡ್ ರೂಪಾಂತರ: ವರದಿ

ಏಜೆನ್ಸೀಸ್
Published 26 ನವೆಂಬರ್ 2021, 11:00 IST
Last Updated 26 ನವೆಂಬರ್ 2021, 11:00 IST
ನಫ್ತಾಲಿ ಬೆನೆಟ್
ನಫ್ತಾಲಿ ಬೆನೆಟ್   

ಜೆರುಸಲೇಮ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‌ನ ರೂಪಾಂತರ ತಳಿಯ (ಬಿ.1.1.529) ಪ್ರಕರಣವೊಂದು ಇಸ್ರೇಲ್‌ನಲ್ಲಿ ವರದಿಯಾಗಿದೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

‘ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಈ ತಳಿ ಹಲವು ಬಾರಿ ಮ್ಯುಟೇಶನ್‌ಗೆ ಒಳಗಾಗಿದೆ. ಇದು ಡೆಲ್ಟಾ ತಳಿಗಿಂತ ಅಧಿಕ ವೇಗದಲ್ಲಿ ಪ್ರಸರಣಗೊಳ್ಳುತ್ತದೆ. ಆಫ್ರಿಕಾದ ಆಗ್ನೇಯ ಭಾಗದಲ್ಲಿರುವ ಮಲಾವಿಯಿಂದ ಮರಳಿದ ವ್ಯಕ್ತಿಯಲ್ಲಿ ಈ ರೂಪಾಂತರ ತಳಿಯ ಸೋಂಕು ಕಂಡುಬಂದಿದೆ’ ಎಂದು ಸಚಿವಾಲಯ ತಿಳಿಸಿದೆ.

ಬಿ.1.1.529 ತಳಿ ಸೋಂಕಿನ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌ ಅವರು ಆರೋಗ್ಯ ಕ್ಷೇತ್ರದ ತಜ್ಞರೊಂದಿಗೆ ತುರ್ತು ಸಭೆ ನಡೆಸಿ, ಚರ್ಚಿಸಿದರು.

ADVERTISEMENT

‘ಈಗ ನಾವು ತುರ್ತು ಪರಿಸ್ಥಿತಿ ಜಾರಿಗೊಳಿಸಬೇಕಾದ ಹಂತದಲ್ಲಿದ್ದೇವೆ. ಈ ಹೊಸ ತಳಿಯ ಸೋಂಕು ಪ್ರಸರಣ ತಡೆಯುವ ಸಲುವಾಗಿ ತ್ವರಿತವಾಗಿ, ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಬೆನೆಟ್‌ ಹೇಳಿದರು’ ಎಂದು ಅವರ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.