ಟೆಲ್‌ಅವೀವ್: ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಕದನ ಮುಂದುವರೆದಿರುವಂತೆಯೇ ಮಿತ್ರ ರಾಷ್ಟ್ರಗಳ ಒತ್ತಡದಿಂದ ಗಾಜಾಗೆ ಸಹಾಯ ಮಾಡಲಾಗುತ್ತಿದೆ ಎಂದು ಸೋಮವಾರ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹಂಚಿಕೊಂಡಿರುವ ನೆತನ್ಯಾಹು, ‘ಗಾಜಾ ಜನರು ಹಸಿವಿನಿಂದ ಒದ್ದಾಡುತ್ತಿರುವ ಬಗ್ಗೆ ನಮ್ಮ ಮಿತ್ರರಾಷ್ಟ್ರಗಳು ಕಳಕಳಿ ವ್ಯಕ್ತಪಡಿಸಿವೆ ಮತ್ತು "ಹೀಗಾದರೆ ನಾವು ನಿಮ್ಮನ್ನು ಬೆಂಬಲಿಸುವುದು ಸಾಧ್ಯವಿಲ್ಲ" ಎಂದೂ ಅವರು ನಮಗೆ ಹೇಳಿದ್ದಾರೆಂದು ನೆತನ್ಯಾಹು ವಿವರಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿನ ರಾಜತಾಂತ್ರಿಕ ನೀತಿಗಳಿಂದ ನಾವು ಗಾಜಾಗೆ ಸಹಾಯ ಮಾಡುತ್ತಿದ್ದೇವೆ. ಆದರೆ, ಸಂಪೂರ್ಣವಾಗಿ ಪ್ಯಾಲೆಸ್ಟೀನ್ ವಶಪಡಿಸಿಕೊಳ್ಳುವ ಮಾತಿಗೆ ನಾವು ಬದ್ದರಾಗಿದ್ದೇವೆ ಎಂದರು.
ಗಾಜಾಕ್ಕೆ ನೀಡಲಾಗುವ ನೆರವು ತೀರಾ ಕನಿಷ್ಠ ಮಟ್ಟದ್ದಾಗಿರುತ್ತದೆ ಎಂದಿರುವ ನೆತಾನ್ಯಹು, ಯಾವಾಗಿನಿಂದ ಈ ನೆರವು ಪುನರಾರಂಭಗೊಳ್ಳಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಖಾನ್ ಯೂನಿಸ್ ತೊರೆಯುವಂತೆ ಸೂಚನೆ:
ಗಾಜಾದ ಎರಡನೇ ಅತಿ ದೊಡ್ಡ ನಗರ ಖಾನ್ ಯೂನಿಸ್ ತೊರೆದು, ಸ್ಥಳಾಂತರಗೊಳ್ಳುವಂತೆ ಇಸ್ರೇಲ್‌ನ ಸೇನಾ ವಕ್ತಾರ ಅವಿಹಯ್ ಅಡ್ರೀ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮೂಲಕ ಸೂಚನೆ ನೀಡಿದ್ದಾರೆ. ಖಾನ್ ಯೂನಸ್‌ನ ಸುತ್ತಮುತ್ತಲಿನ ಪ್ರದೇಶಗಳ ಜನರಿಗೂ ಆ ಸೂಚನೆ ಅನ್ವಯವಾಗಲಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.