ADVERTISEMENT

ಸಲಿಂಗಿ ದಂಪತಿಗಳಿಗೆ 'ಬಾಡಿಗೆ ತಾಯ್ತನ'ದ ಮೇಲಿನ ನಿರ್ಬಂಧ ತೆಗೆದುಹಾಕಿದ ಇಸ್ರೇಲ್

ರಾಯಿಟರ್ಸ್
Published 4 ಜನವರಿ 2022, 10:39 IST
Last Updated 4 ಜನವರಿ 2022, 10:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೆರುಸಲೇಂ: ಸುಪ್ರೀಂ ಕೋರ್ಟ್‌ನ ಆದೇಶವನ್ನು ಎತ್ತಿಹಿಡಿದಿರುವಇಸ್ರೇಲ್‌ ಸರ್ಕಾರ, ಸಲಿಂಗಿ ದಂಪತಿಗಳು ಮತ್ತು ಒಬ್ಬಂಟಿ ಪುರುಷರು ಬಾಡಿಗೆ ತಾಯ್ತನದ ಮೂಲಕ ಪಾಲಕರಾಗುವುದಕ್ಕೆ ಇದ್ದ ನಿರ್ಬಂಧಗಳನ್ನು ಮಂಗಳವಾರ ರದ್ದುಪಡಿಸಿದೆ.

'ಇಸ್ರೇಲ್‌ನಲ್ಲಿ ಎಲ್‌ಜಿಬಿಟಿಕ್ಯೂ(ಸಲಿಂಗಿಗಳು, ಉಭಯ ಲಿಂಗರತಿಗಳು, ಲಿಂಗ ಪರಿವರ್ತಿತರು, ಲಿಂಗದ ಗುರುತಿನ ಬಗ್ಗೆ ಪ್ರಶ್ನೆ ಮಾಡುವ ಸಮೂಹ) ಹೋರಾಟದ ಪಾಲಿಗೆ ಇದೊಂದು ಐತಿಹಾಸಿಕ ದಿನ' ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿರುವಆರೋಗ್ಯ ಸಚಿವ ನಿತ್‌ಜಾನ್‌ ಹೊರೊವಿಟ್ಜ್‌,ಬಾಡಿಗೆ ತಾಯ್ತನಕ್ಕೆ ಅವಕಾಶ ಕಲ್ಪಿಸುವುದಕ್ಕೆ ಸಂಬಂಧಿಸಿದ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

'ಬಾಡಿಗೆ ತಾಯ್ತನ'ದ ಮೂಲಕ ಪೋಷಕರಾಗಲು ಸಾಮಾನ್ಯ ದಂಪತಿ ಮತ್ತು ಒಬ್ಬಂಟಿ ಮಹಿಳೆಯರಿಗೆ ದೊರೆತಿರುವ ಅವಕಾಶವನ್ನು ತಮಗೂ ನೀಡಬೇಕೆಂದುಇಸ್ರೇಲ್‌ನ ಎಲ್‌ಜಿಬಿಟಿಕ್ಯೂ ಸಮುದಾಯವುಹಲವು ವರ್ಷಗಳಿಂದ ಆಗ್ರಹಿಸುತ್ತಾ ಬಂದಿತ್ತು.

ADVERTISEMENT

ಸಲಿಂಗಿ ದಂಪತಿಗಳು ಮತ್ತು ಒಬ್ಬಂಟಿ ಪುರುಷರು ಬಾಡಿಗೆ ತಾಯ್ತನದ ಮೂಲಕ ಪೋಷಕರಾಗುವುದಕ್ಕೆ ನಿರ್ಬಂಧ ಹೇರಿರುವುದು ತಮ್ಮ ಹಕ್ಕುಗಳ ಉಲ್ಲಂಘನೆಯಾಗಿದೆ. ಅದನ್ನು ಆರು ತಿಂಗಳೊಳಗೆ ಹಿಂಪಡೆಯುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದುಸಲಿಂಗಿ ಹಕ್ಕುಗಳ ಹೋರಾಟಗಾರರುಕಳೆದ ಜುಲೈನಲ್ಲಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು.

ಸರ್ಕಾರದ ನಿರ್ಬಂಧ ಇಸ್ರೇಲ್‌ನಲ್ಲಿ ಮಾತ್ರವೇ ಅನ್ವಯವಾಗುತ್ತಿದ್ದ ಕಾರಣ, ಬಾಡಿಗೆ ತಾಯ್ತನಕ್ಕಾಗಿ ಕೆಲವರು ವಿದೇಶಗಳಿಗೆ ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.