ADVERTISEMENT

ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ದಾಳಿ

ಏಜೆನ್ಸೀಸ್
Published 26 ಡಿಸೆಂಬರ್ 2020, 5:25 IST
Last Updated 26 ಡಿಸೆಂಬರ್ 2020, 5:25 IST
ಪ್ರಾತಿನಿಧಿಕ ಚಿತ್ತ
ಪ್ರಾತಿನಿಧಿಕ ಚಿತ್ತ   

ಗಾಜಾ ಸಿಟಿ: ದಕ್ಷಿಣ ಇಸ್ರೇಲ್‌ನ ಕೆಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಲೆಸ್ಟೈನ್‌ ಉಗ್ರರು ನಡೆಸಿದ್ದ ರಾಕೆಟ್‌ ದಾಳಿಗೆ ಪ್ರತಿಯಾಗಿ ಗಾಜಾ ಪಟ್ಟಿಯ ಹಲವು ಜಾಗಗಳ ಮೇಲೆಇಸ್ರೇಲ್‌ ದಾಳಿ ನಡೆಸಿದೆ.

ಹಮಾಸ್‌ ಉಗ್ರ ಸಂಘಟನೆಗೆ ಸೇರಿದ ರಾಕೆಟ್‌ ತಯಾರಿಕೆ ಘಟಕ, ತರಬೇತಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಯುದ್ಧವಿಮಾನಗಳು ದಾಳಿ ನಡೆಸಿವೆ ಎಂದು ಇಸ್ರೇಲ್‌ ಸೇನಾಪಡೆ ಮೂಲಗಳು ಹೇಳಿವೆ.

‘ಕರಾವಳಿ ನಗರ ಅಶ್ಕೆಲಾನ್‌ ಗುರಿಯಾಗಿಸಿಕೊಂಡು ನಡೆದ ರಾಕೆಟ್‌ ದಾಳಿಗೆ ವಾಯುಪಡೆ ಸಮರ್ಥವಾಗಿ ಪ್ರತಿರೋಧವೊಡ್ಡಿತು’ ಎಂದು ಇವೇ ಮೂಲಗಳು ತಿಳಿಸಿವೆ.

ADVERTISEMENT

ಆದರೆ, ಈ ವರೆಗೆ ಈ ದಾಳಿಯ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತಿಕೊಂಡಿಲ್ಲ.

ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಕೆಲವು ಕಟ್ಟಡಗಳಿಗೆ ಸ್ವಲ್ಪ ಧಕ್ಕೆಯಾಗಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಪಾಲೆಸ್ಟೈನ್‌ ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.