ADVERTISEMENT

ಒತ್ತೆಯಾಳು ಅವಶೇಷ ಹಸ್ತಾಂತರ: ಇಸ್ರೇಲ್‌

ಎಪಿ
Published 28 ಅಕ್ಟೋಬರ್ 2025, 15:57 IST
Last Updated 28 ಅಕ್ಟೋಬರ್ 2025, 15:57 IST
   

ಜೆರುಸಲೇಂ: ಹಮಾಸ್‌ ಬಂಡುಕೋರರು ಗಾಜಾದಲ್ಲಿರುವ ರೆಡ್‌ ಕ್ರಾಸ್‌ ಸಂಸ್ಥೆಗೆ ಮತ್ತೊಬ್ಬ ಒತ್ತೆಯಾಳುವಿನ ಅವಶೇಷ ಹಸ್ತಾಂತರಿಸಿದ್ದಾರೆ ಎಂದು ಇಸ್ರೇಲ್‌ ಸೇನೆ ಸೋಮವಾರ ತಿಳಿಸಿದೆ.

ಕದನ ವಿರಾಮ ಆರಂಭವಾದಾಗಿನಿಂದಲೂ 15 ಒತ್ತೆಯಾಳುಗಳ ಅವಶೇಷ ಹಸ್ತಾಂತರ ನಡೆದಿದ್ದು, ಇನ್ನೂ 12 ಮೃತದೇಹಗಳ ಅವಶೇಷ ಹಸ್ತಾಂತರಿಸಬೇಕು ಎಂದಿದೆ.

ಹಮಾಸ್‌ ಹಿಂದಿರುಗಿಸಿರುವ ಒತ್ತೆಯಾಳುಗಳ ಅವಶೇಷಗಳು ಸುಮಾರು ಎರಡು ವರ್ಷದ ಹಿಂದೆ, ಗಾಜಾದಲ್ಲಿ ಇಸ್ರೇಲ್‌ ಪಡೆಗಳು ವಶಪಡಿಸಿಕೊಂಡ ಒತ್ತೆಯಾಳುಗಳ ದೇಹದ ಭಾಗಗಳಾಗಿವೆ ಎಂದು ಪ್ರಧಾನಿ ನೆತನ್ಯಾಹು ಮಂಗಳವಾರ ಹೇಳಿದ್ದಾರೆ.

ADVERTISEMENT

ಇಸ್ರೇಲ್‌– ಹಮಾಸ್ ನಡುವಿನ ಯುದ್ಧದಲ್ಲಿ ಇಸ್ರೇಲ್ ಸೇನೆಯು ಸುಮಾರು 51 ಒತ್ತೆಯಾಳುಗಳ ಮೃತದೇಹ ವಶಪಡಿಸಿಕೊಂಡಿದೆ ಎಂದಿದ್ದಾರೆ.

ಅನುಮತಿಸಲ್ಲ

ಗಾಜಾದಲ್ಲಿ ಇಸ್ರೇಲ್‌– ಹಮಾಸ್‌ ನಡುವಿನ ಕದನ ವಿರಾಮ ಒಪ್ಪಂದವನ್ನು ಮೇಲ್ವಿಚಾರಣೆ ಮಾಡಲು ಅಮೆರಿಕ ಪ್ರಸ್ತಾಪಿಸಿರುವ ಅಂತರರಾಷ್ಟ್ರೀಯ ಪಡೆಯಲ್ಲಿ ಭಾಗವಹಿಸಲು ಟರ್ಕಿ ಪಡೆಗಳಿಗೆ ಅನುಮತಿಸುವುದಿಲ್ಲ ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಹಂಗೇರಿಯಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.