ADVERTISEMENT

ಶಾಂತಿ ಸ್ಥಾಪನೆಗೆ ಕೈ ಜೋಡಿಸಿ; ಪಾಕಿಸ್ತಾನಕ್ಕೆ ಅಮೆರಿಕ ಕಿವಿಮಾತು

ಪಿಟಿಐ
Published 4 ಡಿಸೆಂಬರ್ 2018, 15:53 IST
Last Updated 4 ಡಿಸೆಂಬರ್ 2018, 15:53 IST
ಜಿಮ್‌ ಮ್ಯಾಟಿಸ್‌
ಜಿಮ್‌ ಮ್ಯಾಟಿಸ್‌   

ವಾಷಿಂಗ್ಟನ್‌ : ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆ ಪ್ರಯತ್ನಕ್ಕೆ ‘ಜವಾಬ್ದಾರಿಯುತ ರಾಷ್ಟ್ರ’ಗಳು ಬೆಂಬಲ ನೀಡುವ ಸಮಯ ಸನ್ನಿಹಿತವಾಗಿದೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಜಿಮ್‌ ಮ್ಯಾಟಿಸ್‌ ತಿಳಿಸಿದ್ದಾರೆ. ಈ ಮೂಲಕ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ.

ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಜೊತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಅವರು, ಅಫ್ಗಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಪಾಕಿಸ್ತಾನವು ಪ್ರಮುಖ ಪಾತ್ರವಹಿಸಬೇಕು, ಈ ವಿಷಯದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು.

‘ಕಳೆದ 40 ವರ್ಷಗಳಲ್ಲಿ ಅಫ್ಗಾನಿಸ್ತಾನದಲ್ಲಿ ಯುದ್ಧ ಸಾಕಷ್ಟು ಇಳಿಮುಖವಾಗಿದೆ. ಶಾಂತಿ ಸ್ಥಾಪನೆ ಹಾಗೂ ಉತ್ತಮ ಜಗತ್ತಿನ ನಿರ್ಮಾಣಕ್ಕಾಗಿ ವಿಶ್ವಸಂಸ್ಥೆ, ಪ್ರಧಾನಿ ನರೇಂದ್ರಮೋದಿ ಹಾಗೂ ಅಫ್ಗಾನ್‌ ಅಧ್ಯಕ್ಷ ಅಶ್ರಫ್‌ ಘನಿ ಅವರ ನಿಲುವನ್ನು ಬೆಂಬಲಿಸಬೇಕು’ ಎಂದು ಮ್ಯಾಟಿಸ್‌ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.