ಸನೆ ತಾಕೈಚಿ
ಟೋಕಿಯೊ: ಜಪಾನ್‌ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷ (ಎಲ್‌ಡಿಪಿ) ಹಾಗೂ ಅದರ ಮೈತ್ರಿಪಕ್ಷವು ಮೈತ್ರಿ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಿವೆ. ಇದರಿಂದ, ಸನೆ ತಾಕೈಚಿ ಅವರು ದೇಶದ ಮೊದಲ ಮಹಿಳಾ ಪ್ರಧಾನಿಯಾಗುವ ಹಾದಿ ಸುಗಮವಾಗಿದೆ.
ಐದನೇ ಪ್ರಧಾನ ಮಂತ್ರಿಯಾಗಿ ತಾಕೈಚಿ ಅವರ ಆಯ್ಕೆ ಕುರಿತು ಕೆಳಮನೆಯಲ್ಲಿ ಮತ ಚಲಾಯಿಸುವ ಕೇವಲ ಒಂದು ದಿನ ಮೊದಲು ಜಪಾನ್ ಇನೋವೇಷನ್ ಪಾರ್ಟಿ (ಜೆಐಪಿ) ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅವರು ಗೆದ್ದರೆ, ಅದೇ ದಿನ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
‘ಜಪಾನ್‌ನ ಆರ್ಥಿಕತೆಯನ್ನು ಬಲಪಡಿಸುವ ಮತ್ತು ಭವಿಷ್ಯದ ಪೀಳಿಗೆಗೆ ಜವಾಬ್ದಾರರಾಗಿರುವ ದೇಶವನ್ನಾಗಿ ಮರು ರೂಪಿಸುವ ಪ್ರಯತ್ನಗಳಲ್ಲಿ ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ’ ಎಂದು ತಾಕೈಚಿ ಅವರು ಒಪ್ಪಂದಕ್ಕೆ ಸಹಿ ಹಾಕುವಾಗ ಜೆಐಪಿಯ ಸಹ ಮುಖ್ಯಸ್ಥ ಹಿರೋಫುಮಿ ಯೋಶಿಮುರಾ ಅವರಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.