ADVERTISEMENT

ಜಪಾನ್: ಟೋಕಿಯೊ, ಒಸಾಕದಲ್ಲಿ ಮೂರನೇ ತುರ್ತುಪರಿಸ್ಥಿತಿ ಘೋಷಣೆ

Japan issues 3rd virus emergency in Tokyo, Osaka area

ಏಜೆನ್ಸೀಸ್
Published 23 ಏಪ್ರಿಲ್ 2021, 15:13 IST
Last Updated 23 ಏಪ್ರಿಲ್ 2021, 15:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೋಕಿಯೊ: ಜುಲೈನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಮುಂಚಿತವಾಗಿ ಕೊರೊನಾ ವೈರಸ್ ನಿಯಂತ್ರಿಸಲು ಶುಕ್ರವಾರ ಜಪಾನ್‌ನ ಟೊಕಿಯೊ ಮತ್ತು ಇತರ ಮೂರು ಪ್ರಾಂತ್ಯಗಳಿಗೆ ಮೂರನೇ ಬಾರಿ ತುರ್ತುಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರು ಟೋಕಿಯೊ, ಒಸಾಕಾ, ಕ್ಯೂಟೊ ಮತ್ತು ಹ್ಯೋಗೊ ಪ್ರಾಂತ್ಯಗಳಲ್ಲಿ ಏಪ್ರಿಲ್ 25ರಿಂದ ಮೇ 11ರವರಗೆ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.

ಕೋವಿಡ್ –19 ಪ್ರಾರಂಭವಾದ ಬಳಿಕ ಜಪಾನ್‌ ಮೂರನೇ ಬಾರಿ ತುರ್ತು ಪರಿಸ್ಥಿತಿ ಘೋಷಿಸುತ್ತಿದೆ. ಟೋಕಿಯೊದಲ್ಲಿ ಒಂದು ತಿಂಗಳ ಹಿಂದಷ್ಟೇ ತುರ್ತು ಪರಿಸ್ಥಿತಿ ಮುಕ್ತಾಯವಾಗಿತ್ತು. ಈ ಹಿಂದೆ ಅರೆ ತುರ್ತು ಪರಿಸ್ಥಿತಿ ಕ್ರಮಗಳು ವಿಫಲವಾಗಿದ್ದರಿಂದ ತಜ್ಞವೈದ್ಯರು ಮತ್ತು ಸ್ಥಳೀಯ ನಾಯಕರು ಕಠಿಣ ಕ್ರಮಗಳು ತುರ್ತಾಗಿ ಅಗತ್ಯವಾಗಿವೆ ಎಂದು ಪ್ರತಿಪಾದಿಸಿದ್ದರು.

ADVERTISEMENT

ಈ ಬಾರಿ ಬಾರ್‌ಗಳು, ಮಾಲ್‌ಗಳು, ಥೀಮ್ ಪಾರ್ಕ್‌ಗಳು, ಅಂಗಡಿಗಳು, ಚಿತ್ರಮಂದಿರ, ವಸ್ತುಸಂಗ್ರಹಾಲಯಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ. ಶಾಲೆಗಳು ಮಾತ್ರ ತೆರೆದಿದ್ದು, ವಿಶ್ವವಿದ್ಯಾಲಯಗಳಿಗೆ ಆನ್‌ಲೈನ್ ಮೂಲಕ ತರಗತಿ ನಡೆಸಲು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.