ADVERTISEMENT

ಜಪಾನ್‌ ನೂತನ ಪ್ರಧಾನಿ ಕಿಶಿದಾ ಅಧಿಕಾರಕ್ಕೆ

ಏಜೆನ್ಸೀಸ್
Published 4 ಅಕ್ಟೋಬರ್ 2021, 6:05 IST
Last Updated 4 ಅಕ್ಟೋಬರ್ 2021, 6:05 IST
ಜಪಾನ್‌ನ ಸಂಸತ್‌ನಲ್ಲಿ ನೂತನ ನಾಯಕನ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ತೆರಳಿದ ಫುಮಿಯೊ ಕಿಶಿದಾ   –ಎಎಫ್‌ಪಿ ಚಿತ್ರ
ಜಪಾನ್‌ನ ಸಂಸತ್‌ನಲ್ಲಿ ನೂತನ ನಾಯಕನ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ತೆರಳಿದ ಫುಮಿಯೊ ಕಿಶಿದಾ   –ಎಎಫ್‌ಪಿ ಚಿತ್ರ   

ಟೋಕಿಯೊ: ಜಪಾನ್‌ನ ನೂತನ ಪ್ರಧಾನಿಯಾಗಿ ಮಾಜಿ ವಿದೇಶಾಂಗ ಸಚಿವ ಫುಮಿಯೊ ಕಿಶಿದಾ ಸಂಸತ್‌ನಿಂದ ಸೋಮವಾರ ಆಯ್ಕೆಯಾದರು.

ಜಪಾನ್‌ನ ಸಂಸತ್ ಬೆಳಿಗ್ಗೆ ಕಿಶಿದಾ ಅವರನ್ನು ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್‌ ಪಾರ್ಟಿಯ ನೂತನ ನಾಯಕನಾಗಿ ಆಯ್ಕೆ ಮಾಡುವುದಕ್ಕೆ ಮೊದಲಾಗಿಯೇ ನಿರ್ಗಮಿತ ಪ್ರಧಾನಿ ಯೋಶಿದೆ ಸುಗಾ ಅವರು ರಾಜೀನಾಮೆ ಸಲ್ಲಿಸಿದರು.

ಸುಗಾ ಅವರು ಕೇವಲ ವರ್ಷದೊಳಗೆಯೇ ಪದತ್ಯಾಗ ಮಾಡಿದ್ದು, ಕೋವಿಡ್ ಪಿಡುಗನ್ನು ನಿಭಾಯಿಸಿದ ರೀತಿಗೆ ಹಾಗೂ ಜನರ ವಿರೋಧದ ನಡುವೆಯೂ ಒಪಿಂಪಿಕ್ಸ್ ಆಯೋಜಿಸಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದರು.

ADVERTISEMENT

ಸುಗಾ ಸಂಪುಟದಲ್ಲಿ 20 ಮಂದಿ ಸಚಿವರಿದ್ದರು. ಈ ಪೈಕಿ ಇಬ್ಬರನ್ನು ಮಾತ್ರ ನೂತನ ಸಂಪುಟದಲ್ಲಿ ಉಳಿಸಿಕೊಂಡು, ಉಳಿದಂತೆ ಹೊಸಬರನ್ನೆ ಸಚಿವರನ್ನಾಗಿ ಮಾಡುವ ಸಾಧ್ಯತೆ ಇದೆ. ಸುಗಾ ಸಂಪುಟದಲ್ಲಿ ಇಬ್ಬರು ಮಹಿಳೆಯರಿದ್ದರೆ, ಕಿಶಿದಾ ಸಂಪುಟದಲ್ಲಿ ಮೂವರನ್ನು ಸೇರಿಸಿಕೊಳ್ಳುವ ನಿರೀಕ್ಷೆ ಇದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.