ADVERTISEMENT

ಅಮೆರಿಕದಲ್ಲಿ ಕೋವಿಡ್ ನಿಯಂತ್ರಣಕ್ಕೆ ತುರ್ತು ಕ್ರಮದ ಅಗತ್ಯವಿದೆ: ಜೋ ಬೈಡನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ನವೆಂಬರ್ 2020, 10:08 IST
Last Updated 14 ನವೆಂಬರ್ 2020, 10:08 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಸಾವು-ನೋವುಗಳು ವ್ಯಾಪಕವಾಗುತ್ತಿರುವುದು ನನ್ನನ್ನು ಗಾಬರಿಪಡಿಸಿದೆ ಎಂದು ಜೋ ಬೈಡನ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, 'ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅಮೆರಿಕದಾದ್ಯಂತ ಜನರು ಆಸ್ಪತ್ರೆಗೆ ದಾಖಲಾಗುತ್ತಿರುವುದು, ಸಾವು-ನೋವುಗಳು ಹೆಚ್ಚಾಗುತ್ತಿರುವುದು ನನ್ನನ್ನು ಗಾಬರಿಪಡಿಸಿದೆ. ಈ ಬಿಕ್ಕಟ್ಟಿಗೆ ತಕ್ಷಣವೇ ಪರಿಹಾರ ಬೇಕಿದೆ. ಇದು ಸಂಯುಕ್ತ ಸರ್ಕಾರದ ತುರ್ತು ಪ್ರಕ್ರಿಯೆಗಳನ್ನು ಬಯಸುತ್ತದೆ. ಇದರಲ್ಲಿ ನಾವೀಗ ಹಿಂದುಳಿದಿರುವುದು ದುರದೃಷ್ಟಕರ' ಎಂದು ಬೈಡನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ನಾನು ಅಧ್ಯಕ್ಷನಾಗಿ ಆಯ್ಕೆ ಆಗಿರಬಹುದು. ಆದರೆ, ಮುಂದಿನ ವರ್ಷದವರೆಗೆ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಿಲ್ಲ. ಕೋವಿಡ್‌ ಸಾಂಕ್ರಾಮಿಕವು ದಿನಾಂಕಗಳನ್ನು ನೋಡುವುದಿಲ್ಲ. ಈಗ ಸೋಂಕು ತೀವ್ರವಾಗಿ ಹೆಚ್ಚುತ್ತಿದೆ. ಇದರ ನಿಯಂತ್ರಣಕ್ಕೆ ಪ್ರಸ್ತುತ ಆಡಳಿತದಿಂದ ತುರ್ತು ಕ್ರಮದ ಅಗತ್ಯವಿದೆ' ಎಂದು ಜೋ ಬೈಡನ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.