ADVERTISEMENT

ಜೋ ಬೈಡನ್‌ಗೆ ನಿರ್ಣಾಯಕ ಗೆಲುವು: ಕಮಲಾ ಹ್ಯಾರಿಸ್‌

ಪಿಟಿಐ
Published 11 ನವೆಂಬರ್ 2020, 6:42 IST
Last Updated 11 ನವೆಂಬರ್ 2020, 6:42 IST
ಕಮಲಾ ಹ್ಯಾರಿಸ್‌
ಕಮಲಾ ಹ್ಯಾರಿಸ್‌   

ವಾಷಿಂಗ್ಟನ್‌: ಅಮೆರಿಕನ್ನರು ಜೋ ಬೈಡನ್ ಅವರನ್ನು ಆಯ್ಕೆ ಮಾಡಿರುವುದು ಸ್ಪಷ್ಟವಾಗಿದೆ.ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್‌ ಅವರು ಡೊನಾಲ್ಡ್‌ ಟ್ರಂಪ್‌ ವಿರುದ್ಧ ನಿರ್ಣಾಯಕ ಗೆಲುವನ್ನು ಸಾಧಿಸಿದ್ದಾರೆ ಎಂದು ಅಮೆರಿಕದ ನೂತನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಹೇಳಿದರು.

‘ನಾವು ಈಗಷ್ಟೇ ಚುನಾವಣೆ ನಡೆಸಿದ್ದೇವೆ. ಅಮೆರಿಕ ತನ್ನ ಆಯ್ಕೆಯನ್ನು ಸ್ಪಷ್ಟಪಡಿಸಿದೆ. ಜೋ ಬೈಡನ್‌ಗೆ ಸಿಕ್ಕ ಪ್ರತಿಯೊಂದು ಮತವೂ ಆರೋಗ್ಯ ಸೇವೆಯು ಹಕ್ಕಾಗಿರಬೇಕು, ಸೌಕರ್ಯ ಅಲ್ಲ ಎಂಬುದನ್ನು ಹೇಳುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಜನರು ಜೋ ಬೈಡನ್‌ ಅನ್ನು ಅಧ್ಯಕ್ಷರನ್ನಾಗಿ ಆರಿಸಿದ್ದಾರೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ಚುನಾವಣಾ ಫಲಿತಾಂಶದ ಬಗ್ಗೆ ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಬೇಕೆಂಬ ಬೇಡಿಕೆ ಮುಂದಿಡಲಾಗಿದೆ. ಇದು ಜನರ ಇಚ್ಛೆಯ ವಿರುದ್ಧದ ನಡೆಯಾಗಿದೆ. ಇಂತಹ ಕಾರ್ಯ ನಡೆಯಲು ನಾನು ಬಿಡುವುದಿಲ್ಲ’ ಎಂದು ಕಮಲಾ ಅವರು ವಿಲ್ಮಿಂಗ್ಟನ್‌ನಲ್ಲಿ ಹೇಳಿದ್ದರು.

ADVERTISEMENT

ಜೋ ಬೈಡನ್‌ ಅವರು 7.64 ಕೋಟಿ ಮತಗಳನ್ನು ಪಡೆದಿದ್ದಾರೆ. ಈವರೆಗೆ 538 ಎಲೆಕ್ಟೋರ್‌ ಮತಗಳ ಪೈಕಿ 279 ಎಲೆಕ್ಟೋರ್‌ ಮತಗಳನ್ನು ಪಡೆದಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ವರದಿ ಮಾಡಲಾಗಿದೆ.

ಡೊನಾಲ್ಡ್‌ ಟ್ರಂಪ್‌ ಪರವಾಗಿ 7.17 ಕೋಟಿ ಮತಗಳು ಮತ್ತು ಎಲೆಕ್ಟೋರ್‌ ಮತಗಳು 214ಲಭಿಸಿವೆ. ಇನ್ನೂ 45 ಎಲೆಕ್ಟೋರ್‌ ಮತಗಳ ಎಣಿಕೆ ಬಾಕಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.