ಬಾಸ್ಟನ್: ಹಾರ್ವರ್ಡ್ ವಿಶ್ವವಿದ್ಯಾಲಯದ ₹22,909 ಕೋಟಿ ಸಂಶೋಧನಾ ಅನುದಾನವನ್ನು ಕಡಿತಗೊಳಿಸಿರುವ ಟ್ರಂಪ್ ಸರ್ಕಾರದ ನಿರ್ಣಯವನ್ನು ಹಿಂಪಡೆಯುವಂತೆ ಇಲ್ಲಿನ ಫೆಡರಲ್ ನ್ಯಾಯಾಲಯ ಬುಧವಾರ ಆದೇಶಿಸಿದೆ.
‘ಹಾರ್ವರ್ಡ್ ವಿಶ್ವವಿದ್ಯಾಲಯದ ಆಡಳಿತ ನೀತಿಗಳಲ್ಲಿ ಬದಲಾವಣೆ ತರಬೇಕೆಂಬ ಟ್ರಂಪ್ ಬೇಡಿಕೆಯನ್ನು ಹಾರ್ವರ್ಡ್ ತಿರಸ್ಕಾರಿಸಿದ್ದಕ್ಕಾಗಿ, ಪ್ರತೀಕಾರವಾಗಿ ಸರ್ಕಾರವು ಅನುದಾನ ಕಡಿತಗೊಳಿಸಿದೆ. ಇದು ಕಾನೂನುಬಾಹಿರ’ ಎಂದು ಅಮೆರಿಕದ ಜಿಲ್ಲಾ ನ್ಯಾಯಾಧೀಶರಾದ ಆ್ಯಲಿಸನ್ ಬರೋಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.