ವಾಷಿಂಗ್ಟನ್: ಅಮೆರಿಕದ ಸುಪ್ರೀಂ ಕೋರ್ಟ್ ನಂತರ ಪ್ರಬಲ ನ್ಯಾಯಾಲಯವೆಂದೇ ಪರಿಗಣಿಸಲ್ಪಟ್ಟಿರುವ ಫೆಡರಲ್ ಸರ್ಕೀಟ್ ಕೋರ್ಟ್‌ನ ಮುಖ್ಯ ನ್ಯಾಯಮುರ್ತಿಯಾಗಿ ಭಾರತ ಮೂಲದ ಶ್ರೀನಿವಾಸನ್ ನೇಮಕಗೊಂಡಿದ್ದಾರೆ.
ಅಮೆರಿಕದ ನ್ಯಾಯಾಲಯಗಳಲ್ಲಿ ದೊಡ್ಡ ಹುದ್ದೆ ಅಲಂಕರಿಸಿದ ಭಾರತ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. 52 ವರ್ಷದ ಶ್ರೀನಿವಾಸನ್ ಅವರು ಅಮೆರಿಕದ ಅಪೀಲುಗಳ ಡಿಸಿ ಸರ್ಕೀಟ್ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಈಗಾಗಲೇ ಎರಡು ಬಾರಿ ಪರಿಗಣಿಸಲ್ಪಟ್ಟಿದ್ದ ಶ್ರೀನಿವಾಸನ್ ಅವರು, ಇದೇ ಫೆಬ್ರುವರಿ 12 ರಂದು ಡಿಸಿ ಫೆಡರಲ್ ಸರ್ಕೀಟ್ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.