ADVERTISEMENT

ಬರ್ಲಿನ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ: ಕನ್ನಡ ಹಾಡುಗಳಿಗೆ ಜರ್ಮನಿ ಯುವತಿಯರ ನೃತ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ನವೆಂಬರ್ 2023, 18:23 IST
Last Updated 4 ನವೆಂಬರ್ 2023, 18:23 IST
   

‘ಬರ್ಲಿನ್ ಕನ್ನಡ ಬಳಗ’ವು ಜರ್ಮನಿಯ ಬರ್ಲಿನ್‌ನಲ್ಲಿ ಇಂದು (ಶನಿವಾರ) ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿತು.

ಸಮಾರಂಭದಲ್ಲಿ ಡಾ.ರಾಜ್‌ಕುಮಾರ್‌ ನಟನೆಯ ‘ಸತ್ಯ ಹರಿಶ್ಚಂದ್ರ’ ಸಿನಿಮಾದ ‘ಕುಲದಲ್ಲಿ ಕೀಳ್ಯಾವುದೋ..’ ಹಾಗೂ ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್ ನಟನೆಯ ‘ಟಗರು’ ಸಿನಿಮಾದ ‘ಟಗರು’ ಹಾಡುಗಳಿಗೆ ಜರ್ಮನಿಯ ಜೆನ್ನಿಫರ್‌ ಹಾಗೂ ನೊಟಯ ಎಂಬ ಯುವತಿಯರು ನೃತ್ಯ ಮಾಡಿದರು.

ವಿದೇಶಿ ಯುವತಿಯರು ಕನ್ನಡದ ಗೀತೆಗಳಿಗೆ ನೃತ್ಯ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.