ADVERTISEMENT

ಎಫ್‌ಬಿಐ ಮುಖ್ಯಸ್ಥರಾಗಿ ಕಾಶ್‌ ಪಟೇಲ್‌ ನೇಮಕ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2024, 0:17 IST
Last Updated 2 ಡಿಸೆಂಬರ್ 2024, 0:17 IST
<div class="paragraphs"><p>ಎಫ್‌ಬಿಐ&nbsp;</p></div>

ಎಫ್‌ಬಿಐ 

   

ವಾಷಿಂಗ್ಟನ್‌: ಭಾರತೀಯ ಅಮೆರಿಕನ್‌ ಕಾಶ್‌ ಪಟೇಲ್ ಅವರನ್ನು ಎಫ್‌ಬಿಐ ಮುಖ್ಯಸ್ಥರನ್ನಾಗಿ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇಮಕ ಮಾಡಿದ್ದಾರೆ.

ಸರ್ಕಾರದ ವಿರುದ್ಧ ನಡೆಸುವ ಒಳಸಂಚನ್ನು ಗ್ರಹಿಸಿ, ಅದರಿಂದ ಪಾರು ಮಾಡಲಿಕ್ಕಾಗಿ ತಮ್ಮ ಆಪ್ತನನ್ನೇ ಅಮೆರಿಕದ ತನಿಖಾ ಸಂಸ್ಥೆಯ ಮುಖ್ಯಸ್ಥರನ್ನಾಗಿ ಟ್ರಂಪ್‌ ನೇಮಕ ಮಾಡಿದ್ದಾರೆ ಎನ್ನಲಾಗಿದೆ.

ADVERTISEMENT

ಸರ್ಕಾರದ ಕಾನೂನು ಜಾರಿ ಮತ್ತು ತನಿಖಾ ಸಂಸ್ಥೆಗಳಲ್ಲಿ ಆಮೂಲಾಗ್ರ ಬದಲಾವಣೆ ಬಯಸಿರುವ ಟ್ರಂಪ್‌, ತಮ್ಮ ಎದುರಾಳಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿಯೇ ಪ್ರಮುಖ ಹುದ್ದೆಗಳಿಗೆ ನೇಮಕಾತಿ ನಡೆದಿದೆ ಎಂದು ವಿಶ್ಲೇಷಿಸಲಾಗಿದೆ.

‘ಸತ್ಯ, ಹೊಣೆಗಾರಿಕೆ ಮತ್ತು ಸಂವಿಧಾನದ ರಕ್ಷಕರಾಗಿರುವ ಪಟೇಲ್‌, ರಷ್ಯಾದ ವಂಚನೆಯನ್ನು ಬಹಿರಂಗ ಪಡಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಟ್ರಂಪ್‌ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.