ADVERTISEMENT

ಕಾಶ್ಮೀರ ವಿವಾದ: ಭಾರತೀಯರ ಕ್ಷಮೆಯಾಚಿಸಿದ ಅಮೆರಿಕ ಸಂಸದ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 17:24 IST
Last Updated 13 ಆಗಸ್ಟ್ 2019, 17:24 IST
ಟಾಮ್‌ ಸುಯೋಜಿ
ಟಾಮ್‌ ಸುಯೋಜಿ   

ವಾಷಿಂಗ್ಟನ್: ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಮಾಡಿದ ಭಾರತದ ಕ್ರಮ ಕುರಿತಂತೆ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರಿಗೆ ಪತ್ರ ಬರೆದಿದ್ದ ಸಂಸದ ಟಾಮ್‌ ಸುಯೋಜಿ, ಇಲ್ಲಿನ ಭಾರತೀಯ ಅಮೆರಿಕನ್ನರ ಕ್ಷಮೆ ಯಾಚಿದ್ದಾರೆ.

‘ಈ ರೀತಿ ಪತ್ರ ಬರೆಯುವ ಮುನ್ನ ನಾನು ಭಾರತೀಯ ಅಮೆರಿಕನ್ನರೊಂದಿಗೆ ಸಮಾಲೋಚನೆ ನಡೆಸಲಿಲ್ಲ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿದ್ದಾರೆ.

ಆಗಸ್ಟ್‌ 9ರಂದು ಪಾಂಪಿಯೊ ಅವರಿಗೆ ಪತ್ರ ಬರೆದಿದ್ದ ಟಾಮ್‌, ‘ಭಾರತದ ಈ ನಿರ್ಧಾರದಿಂದ ಕಾಶ್ಮೀರದಲ್ಲಿ ಅಸಮಾಧಾನ ಭುಗಿಲೇಳಲಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದರು.

ADVERTISEMENT

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ‘ಅಮೆರಿಕನ್ ಇಂಡಿಯಾ ಪಬ್ಲಿಕ್‌ ಅಫೇರ್ಸ್‌ ಕಮಿಟಿ’ಯ ಅಧ್ಯಕ್ಞ ಜಗದೀಶ್ ಸೆವ್ಹಾನಿ, ‘ಪತ್ರ ಬರೆಯುವುದಾದರೆ, ತನ್ನ ನೆಲದಲ್ಲಿರುವ ಉಗ್ರ ಸಂಘಟನೆಗಳ ವಿರುದ್ಧ ನಿರ್ಣಾಯಕ ಮತ್ತು ಮಾರ್ಪಡಿಸಲಾಗದಂತಹ ಕ್ರಮ ಕೈಗೊಳ್ಳುವಂತೆ ‍ಪಾಕಿಸ್ತಾನಕ್ಕೆ ತಾಕೀತು ಮಾಡಿ ಪತ್ರ ಬರೆಯಲಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.