ADVERTISEMENT

ಕಜಕಸ್ತಾನದಲ್ಲಿ ಮರಣದಂಡನೆ ರದ್ದು

ಏಜೆನ್ಸೀಸ್
Published 2 ಜನವರಿ 2021, 8:13 IST
Last Updated 2 ಜನವರಿ 2021, 8:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನೂರ್‌–ಸುಲ್ತಾನ್‌: ಕಜಕಸ್ತಾನದಲ್ಲಿ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ.

ಈ ಬಗ್ಗೆಕಜಕಸ್ತಾನದ ರಾಷ್ಟ್ರಪತಿ ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಶನಿವಾರ ಪ್ರಕಟಿಸಲಾಗಿದೆ.

ಮರಣದಂಡನೆಯನ್ನು ರದ್ದುಗೊಳಿಸುವ ಕುರಿತಾದ ಅಧಿಸೂಚನೆಗೆ ರಾಷ್ಟ್ರಪತಿ ಕಾಸಿಮ್-ಜೋಮಾರ್ಟ್ ಟೋಕಾಯೆವ್ ಅವರು ಸಹಿ ಹಾಕಿದ್ದಾರೆ.

ADVERTISEMENT

ಕಜಕಸ್ತಾನದಲ್ಲಿ 2003ರಿಂದ ಮರಣದಂಡನೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಭಯೋತ್ಪಾದಕ ಕೃತ್ಯ ಸೇರಿದಂತೆ ಇತರೆ ಗಂಭೀರ ಅಪರಾಧಗಳಿಗೆ ಮರಣದಂಡನೆಯನ್ನು ವಿಧಿಸಿ ನ್ಯಾಯಾಲಯಗಳು ಆದೇಶ ನೀಡುವುದನ್ನು ಮುಂದುವರಿಸಿದ್ದವು.

2016ರಲ್ಲಿ ಕಜಕಸ್ತಾನದ ಅಲ್ಮಾಟಿಯಲ್ಲಿ ಎಂಟು ಪೊಲೀಸರು ಮತ್ತು ಇಬ್ಬರು ನಾಗರಿಕರನ್ನು ಹತ್ಯೆಗೈದಿದ್ದ ರುಸ್ಲಾನ್ ಕುಲೆಕ್ಬಾಯೆವ್‌ಗೆ ಮರಣ ದಂಡನೆ ವಿಧಿಸಲಾಗಿತ್ತು. ಒಂದು ವೇಳೆ, ಕಜಕಸ್ತಾನದಲ್ಲಿ ಮರಣ ದಂಡನೆಯನ್ನು ರದ್ದುಗೊಳಿಸಿದರೆ, ರುಸ್ಲಾನ್ ಕುಲೆಕ್ಬಾಯೆವ್‌ಗೆ ನೀಡಲಾಗಿರುವ ಮರಣ ದಂಡನೆಯನ್ನು ಕೂಡ ತಡೆಯಲಾಗುತ್ತದೆ. ಅದರ ಬದಲಿಗೆ ರುಸ್ಲಾನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.