ADVERTISEMENT

ರಾಜ 3ನೇ ಚಾರ್ಲ್ಸ್‌ ಪಟ್ಟಾಭಿಷೇಕ: ‘ಕಾಮನ್‌ವೆಲ್ತ್ ’ ಬಿಂಬಿಸುವ ಪರದೆ ಬಳಕೆ

ಪಿಟಿಐ
Published 30 ಏಪ್ರಿಲ್ 2023, 11:34 IST
Last Updated 30 ಏಪ್ರಿಲ್ 2023, 11:34 IST
ರಾಜ ಮೂರನೇ ಚಾರ್ಲ್ಸ್‌
ರಾಜ ಮೂರನೇ ಚಾರ್ಲ್ಸ್‌    

ಲಂಡನ್‌: ಇಲ್ಲಿನ ವೆಸ್ಟ್‌ಮಿನ್‌ಸ್ಟರ್‌ ಅಬೆಯಲ್ಲಿ ಮೇ 6ರಂದು ನಡೆಯಲಿರುವ ಬ್ರಿಟನ್‌ ರಾಜ ಮೂರನೇ ಚಾರ್ಲ್ಸ್‌ ಅವರ ಪಟ್ಟಾಭಿಷೇಕ ಸಮಾರಂಭದ ಪ್ರಮುಖ ಧಾರ್ಮಿಕ ಕಾರ್ಯಕ್ರಮದಲ್ಲಿ ಬಳಸಲಿರುವ ಬಟ್ಟೆಯ ಪರದೆಯಲ್ಲಿ ಭಾರತ ಸೇರಿದಂತೆ ಕಾಮನ್‌ವೆಲ್ತ್‌ ದೇಶಗಳ ಹೆಸರುಗಳನ್ನು ಕಸೂತಿ ಮಾಡಲಾಗಿದೆ ಎಂದು ಬಕ್ಕಿಂಗ್‌ಹ್ಯಾಮ್‌ ಅರಮನೆ ಮೂಲಗಳು ತಿಳಿಸಿವೆ.

ಕಾಮನ್‌ವೆಲ್ತ್‌ ರಾಷ್ಟ್ರಗಳನ್ನು ಪ್ರತಿನಿಧಿಸುವ 56 ಎಲೆಗಳನ್ನು ಹೊಂದಿರುವ ಕೊಂಬೆಗಳಿರುವ ಮರದ ವಿನ್ಯಾಸದ ‘ಅಭಿಷೇಕದ ಪರದೆ’ಯನ್ನು  ಈಚೆಗೆ ಅನಾವರಣಗೊಳಿಸಲಾಗಿದೆ.

ಮರದ ವಿನ್ಯಾಸದಲ್ಲಿರುವ ಹಕ್ಕಿಗಳು ಕಾಮನ್‌ವೆಲ್ತ್‌ ಸದಸ್ಯ ರಾಷ್ಟ್ರಗಳ ಜೊತೆಗಿನ ಸಾಮರಸ್ಯ ಮತ್ತು ಸಂವಹನವನ್ನು ಸಾಂಕೇತಿಸುತ್ತದೆ ಎಂದು ವಿನ್ಯಾಸಕಾರ ಐಡನ್ ಹಾರ್ಟ್ ಹೇಳಿದ್ದಾರೆ.

ADVERTISEMENT

ಕಾಮನ್‌ವೆಲ್ತ್‌ ಬಗೆಗೆ ಚಾರ್ಲ್ಸ್‌ ಅವರಿಗಿರುವ ಪ್ರೀತಿಯು ಈ ಮೂಲಕ ವ್ಯಕ್ತವಾಗಿದೆ ಎಂದೂ ಅರಮನೆಯ ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.