ADVERTISEMENT

ಬುಕರ್ ಪ್ರಶಸ್ತಿಯ ಮೊದಲ ಸುತ್ತಿಗೆ ಕಿರಣ್‌ ದೇಸಾಯಿ ಕೃತಿ

ಪಿಟಿಐ
Published 29 ಜುಲೈ 2025, 15:37 IST
Last Updated 29 ಜುಲೈ 2025, 15:37 IST
ಕಿರಣ್‌ ದೇಸಾಯಿ  (ಲೇಖಕಿಯ ‘ಎಕ್ಸ್‌’ ಖಾತೆಯಿಂದ)
ಕಿರಣ್‌ ದೇಸಾಯಿ  (ಲೇಖಕಿಯ ‘ಎಕ್ಸ್‌’ ಖಾತೆಯಿಂದ)   

ನವದೆಹಲಿ: ಹೆಸರಾಂತ ಲೇಖಕಿ ಕಿರಣ್‌ ದೇಸಾಯಿ ಅವರ ಇತ್ತೀಚಿನ ಕಾದಂಬರಿ ‘ದಿ ಲೋನ್‌ನ್ಲಿನೆಸ್‌ ಆಫ್‌ ಸೋನಿಯಾ ಆ್ಯಂಡ್‌ ಸನಿ’ ಕೃತಿಯು ಪ್ರತಿಷ್ಠಿತ ಬುಕರ್‌ ಪ್ರಶಸ್ತಿಯ ಮೊದಲ ಸುತ್ತಿಗೆ ಆಯ್ಕೆಯಾಗಿದೆ.

ಅವರ ‘ದಿ ಇನ್‌ಹೆರಿಟನ್ಸ್ ಆಫ್ ಲಾಸ್‌’ ಕೃತಿಗೆ ಬುಕರ್‌ ಪ್ರಶಸ್ತಿ ಲಭಿಸಿ 19 ವರ್ಷಗಳ ನಂತರ ಅವರ ಮತ್ತೊಂದು ಕೃತಿಯು ಮತ್ತೆ ಸ್ಥಾನ ಪಡೆದಂತಾಗಿದೆ.

ಬುಕರ್‌ ‍ಪ್ರೈಜ್‌ ಫೌಂಡೇಷನ್, ಈ ಬಗ್ಗೆ ಮಂಗಳವಾರ ಘೋಷಣೆ ಮಾಡಿದೆ. ಒಟ್ಟು ಒಂಬತ್ತು ದೇಶಗಳ ಏಳು ಜನ ಮಹಿಳೆಯರು ಹಾಗೂ ಆರು ಜನ ಪುರುಷರು ರಚಿಸಿರುವ ಕಾದಂಬರಿಗಳು ಪಟ್ಟಿಯಲ್ಲಿವೆ.

ADVERTISEMENT

‘ಕೆಲವು ಸಣ್ಣ ಕತೆಗಳು ಹಾಗೂ ದೀರ್ಘ ಕಾದಂಬರಿಗಳು ಪಟ್ಟಿಯಲ್ಲಿವೆ. ನಮ್ಮ ಭೂತ ಹಾಗೂ ವರ್ತಮಾನವನ್ನು ಒರೆಗೆ ಹಚ್ಚುವ ಪ್ರಯತ್ನಗಳು, ಹೊಸ ಪ್ರಯೋಗಗಳು ಈ ಕೃತಿಗಳಲ್ಲಿ ಕಂಡುಬರುತ್ತವೆ. ನಿರೂಪಣೆ ಹಾಗೂ ಪಾತ್ರಗಳ ಸೃಷ್ಟಿ ದೃಷ್ಟಿಯಿಂದ ಈ ಎಲ್ಲ ಕೃತಿಗಳು ಗಮನ ಸೆಳೆಯುವಂತಿವೆ’ ಎಂದು ತೀರ್ಪುಗಾರರ ಮಂಡಳಿ ಮುಖ್ಯಸ್ಥ ರೊಡಿ ಡಾಯ್ಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಮೀಶ್‌ ಹ್ಯಾಮಿಲ್ಟನ್‌ ಅವರು ದೇಸಾಯಿ ಅವರ ಕಾದಂಬರಿಯನ್ನು ಪ್ರಕಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.