ಟೋಕಿಯೊ:ಜಪಾನ್ ಪ್ರಧಾನಿಯಾಗಿ ಫುಮಿಯೊ ಕಿಶಿಡಾ ಅವರು ಬುಧವಾರ ಪುನರಾಯ್ಕೆಯಾಗಿದ್ದಾರೆ.
ಈಚೆಗೆ ನಡೆದ ಚುನಾವಣೆಯಲ್ಲಿ ಕಿಶಿಡಾ ನೇತೃತ್ವದ ಲಿಬರಲ್ ಡೆಮಾಕ್ರಟಿಕ್ ಪಕ್ಷವು 261 ಸ್ಥಾನಗಳನ್ನು ಪಡೆಯುವ ಮೂಲಕ ಜಯ ಗಳಿಸಿತ್ತು.
ಮತದಾರರು ಬದಲಾವಣೆಗಿಂತ ಸ್ಥಿರತೆ ಬಯಸಿದ್ದಾರೆ ಎಂಬುದನ್ನು ಈ ಫಲಿತಾಂಶವು ಸೂಚಿಸುತ್ತದೆ ಎಂದು ಕಿಶಿಡಾ ಹರ್ಷ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.