ADVERTISEMENT

ಚಬಹಾರ್‌ ಬಂದರು ಅಭಿವೃದ್ಧಿಗೆ ನಿರ್ಬಂಧ ಇಲ್ಲ

ಪಿಟಿಐ
Published 7 ನವೆಂಬರ್ 2018, 20:00 IST
Last Updated 7 ನವೆಂಬರ್ 2018, 20:00 IST

ವಾಷಿಂಗ್ಟನ್‌: ಇರಾನ್‌ನಲ್ಲಿನ ಚಬಹಾರ್‌ ಬಂದರು ಅಭಿವೃದ್ಧಿ‍ಪಡಿಸಲು ವಿಧಿಸುವ ನಿರ್ಬಂಧಗಳಿಂದ ವಿನಾಯಿತಿ ನೀಡುವುದಾಗಿ ಅಮೆರಿಕ ತಿಳಿಸಿದೆ.

ಭಾರತ ಈ ಬಂದರು ಅಭಿವೃದ್ಧಿಪಡಿಸುತ್ತಿದೆ. ಇರಾನ್‌ ಮೇಲೆ ಅಮೆರಿಕ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದರೂ ಭಾರತ ಕೈಗೊಂಡಿರುವ ಅಭಿವೃದ್ಧಿ ವಿಷಯಗಳಲ್ಲಿ ವಿನಾಯಿತಿ ನೀಡಿರುವುದು ಗಮನಾರ್ಹವಾಗಿದೆ.

‘ಭಾರತಕ್ಕೆ ವಿನಾಯಿತಿ ನೀಡುವ ಮೂಲಕ ಟ್ರಂಪ್‌ ಆಡಳಿತ ಉತ್ತಮ ನಿರ್ಧಾರ ಕೈಗೊಂಡಿದೆ’ ಎಂದು ಹೆರಿಟೇಜ್‌ ಫೌಂಡೇಷನ್‌ನ ಜೆಫ್‌ ಸ್ಮಿತ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.