ADVERTISEMENT

ರಷ್ಯಾದಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿದರೆ 15 ವರ್ಷ ಜೈಲು

ರಷ್ಯಾ ಸಂಸತ್‌ನಲ್ಲಿ ಹೊಸ ಮಸೂದೆ ಮಂಡನೆ

ಏಜೆನ್ಸೀಸ್
Published 4 ಮಾರ್ಚ್ 2022, 13:58 IST
Last Updated 4 ಮಾರ್ಚ್ 2022, 13:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಾಸ್ಕೊ (ಎಪಿ): ಮಿಲಿಟರಿ ಕಾರ್ಯಾಚರಣೆ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುಳ್ಳು ಸುದ್ದಿ ಹರಡುವವರಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸುವ ಹೊಸ ಮಸೂದೆಯನ್ನು ರಷ್ಯಾ ಸಂಸತ್‌ ಅಂಗೀಕರಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ.

ಮಸೂದೆಯು ಈಗ ಮೇಲ್ಮನೆಯಲ್ಲಿದ್ದು, ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅಂಕಿತದ ಹಾಕಿದ ಬಳಿಕ ಕಾನೂನು ಆಗಿ ರೂಪುಗೊಳ್ಳಲಿದೆ. ಇದು ಶನಿವಾರದಿಂದಲೇ ಜಾರಿಯಾಗಲಿದೆ ಎಂದು ಸ್ಪೀಕರ್‌ ವ್ಯಾಚೆಸ್ಲಾವ್‌ ವೋಲಿಡಿನ್‌ ಹೇಳಿದ್ದಾರೆ.

ಇದರ ಪ್ರಕಾರ ಸುಳ್ಳು ಹರಡುವವರ ವಿರುದ್ಧ ರಷ್ಯಾ ಅಧಿಕಾರಿಗಳು ಕ್ರಮ ಕೈಗೊಂಡು 3ರಿಂದ 15 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಬಹುದು. ಜತೆಗೆ ರಷ್ಯಾದ ಮೇಲೆ ನಿರ್ಬಂಧ‌ ವಿಧಿಸಲು ಕರೆ ನೀಡುವ ಸುದ್ದಿಗಳನ್ನು ಪ್ರಸಾರ ಮಾಡುವುದನ್ನೂ ಈ ಮಸೂದೆ ನಿಷೇಧಿಸುತ್ತದೆ.

ADVERTISEMENT

ಮಸೂದೆಅಂಗೀಕಾರಗೊಂಡ ಕೆಲ ಗಂಟೆಗಳಲ್ಲಿಯೇ ವೆಬ್‌ಸೈಟ್‌ ಒಂದನ್ನು ಮುಚ್ಚಲಾಗಿದೆ. ರಷ್ಯಾದ ಮಾಧ್ಯಮ ಲೋಕದ ಮೇಲೆ ಈ ಮಸೂದೆ ಭಾರಿ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಪ್ರಮುಖ ರೇಡಿಯೊ ಅನ್ನು ಮುಚ್ಚಲಾಗಿದ್ದು, ಟಿವಿ ವಾಹಿನಿಯೊಂದು ಸಹ ತನ್ನ ಪ್ರಸಾರ ಸ್ಥಗಿತ‌ಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.