ADVERTISEMENT

ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ಪೊರೈಕೆ: ಅಮೆರಿಕ, ಜರ್ಮನಿಗೆ ರಷ್ಯಾ ಎಚ್ಚರಿಕೆ

ಏಜೆನ್ಸೀಸ್
Published 3 ಮಾರ್ಚ್ 2023, 12:37 IST
Last Updated 3 ಮಾರ್ಚ್ 2023, 12:37 IST
ರಷ್ಯಾ ಅಧ್ಯಕ್ಷ  ವ್ಲಾದಿಮಿರ್ ಪುಟಿನ್
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್   

ಮಾಸ್ಕೊ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಜರ್ಮನಿ ಚಾನ್ಸೆಲರ್‌ ಓಲಾಫ್‌ ಸ್ಕೋಲ್ಜ್ ಅವರು ಉಕ್ರೇನ್‌ಗೆ ಹೆಚ್ಚಿನ ಶಸ್ತ್ರಾಸ್ತ್ರಗಳ ಪೂರೈಕೆ ಮಾಡಲು ಮುಂದಾಗಿರುವುದಕ್ಕೆ ರಷ್ಯಾ ಆಕ್ಷೇಪ ವ್ಯಕ್ತಪಡಿಸಿದೆ.

‘ಶಸ್ತ್ರಾಸ್ತ್ರ ವಿತರಣೆಯೂ ದೇಶಗಳ ಆರ್ಥಿಕತೆಯ ಮೇಲೆ ಗಮನಾರ್ಹವಾದ ಹೊರೆಯುಂಟು ಮಾಡುತ್ತದೆ ಮತ್ತು ಜರ್ಮನಿ ಸೇರಿದಂತೆ ಈ ದೇಶಗಳ ನಾಗರಿಕರ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ‘ ಎಂದು ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.

‘ಇದು ಸಂಘರ್ಷವನ್ನು ಹೆಚ್ಚಿಸುವುದರ ಜತೆಗೆ ಉಕ್ರೇನ್‌ ಜನರಿಗೆ ದುಃಖದ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದು ಸ್ಪಷ್ಟವಾಗಿದೆ’ ಎಂದು ಡಿಮಿಟ್ರಿ ಎಚ್ಚರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.