ದುಬೈ: ಕುವೈತ್‌ನ ಸಂಪುಟದ ಸಚಿವರು ಮಂಗಳವಾರ ರಾಜೀನಾಮೆ ನೀಡುವುದರೊಂದಿಗೆ ಕೊಲ್ಲಿ ರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ.
ತೈಲ ನಿಕ್ಷೇಪಗಳ ಕಾರಣ ಶ್ರೀಮಂತ ಕೊಲ್ಲಿ ರಾಷ್ಟ್ರವೆನಿಸಿರುವ ಕುವೈತ್‌ನಲ್ಲಿ ಆರ್ಥಿಕ ಬಿಕ್ಕಟ್ಟಿಗೂ ಈ ಬೆಳವಣಿಗೆ ಕಾರಣವಾಗಿದೆ.
ಕೊಲ್ಲಿ ರಾಷ್ಟ್ರವನ್ನು ಆಳುತ್ತಿರುವ ರಾಜಮನೆತನ ಹಾಗೂ ಸಂಸತ್ ನಡುವಿನ ಮುಸುಕಿನ ಗುದ್ದಾಟ ಈ ಬೆಳವಣಿಗೆಯೊಂದಿಗೆ ಹೊಸ ಮಜಲು ತಲುಪಿದಂತಾಗಿದೆ.
ಪ್ರಧಾನ ಮಂತ್ರಿ ಇತ್ತೀಚೆಗೆ ಮಾಡಿರುವ ಕೆಲವು ನೇಮಕಗಳು ಸಚಿವರ ಆಕ್ರೋಶಕ್ಕೆ ಕಾರಣವಾಗಿವೆ. ಅದರಲ್ಲೂ, ಗಣ್ಯ ವರ್ತಕ ಕುಟುಂಬಕ್ಕೆ ಸೇರಿದ ಹಾಗೂ ಮಾಜಿ ಸ್ಪೀಕರ್‌ವೊಬ್ಬರನ್ನು ಪುನಃ ಸಂಸತ್‌ಗೆ ನಾಮಕರಣ ಮಾಡಿದ್ದು ಉಳಿದವರನ್ನು ಕೆರಳಿಸಿದೆ. ಈ ನೇಮಕದಿಂದ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಲಿದೆ ಎಂಬ ಆತಂಕವನ್ನು ಸಂಪುಟ ತೊರೆದ ಸಚಿವರು ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.