ಸಾಂದರ್ಭಿಕ ಚಿತ್ರ
ಕೀವ್ (ಉಕ್ರೇನ್): ಕೀವ್‌ನ ಮಕ್ಕಳ ಆಸ್ಪತ್ರೆ ಮೇಲೆ ರಷ್ಯಾ ನಡೆಸಿದ್ದ ಭೀಕರ ಕ್ಷಿಪಣಿ ದಾಳಿಯಿಂದಾಗಿ ಅವಶೇಷಗಳಡಿ ಸಿಲುಕಿದ್ದವರ ರಕ್ಷಣಾ ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿಯಿತು.
ದಾಳಿಯಲ್ಲಿ 38 ಮಂದಿ ಮೃತಪಟ್ಟಿದ್ದಾರೆ ಮತ್ತು ಸುಮಾರು 200 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದರು.
ರಾಜಧಾನಿಯ ಆಸ್ಪತ್ರೆಯಲ್ಲಿ 64 ಮಂದಿ, ಕ್ರಿವ್ಯಿ ರಿಹ್‌ನಲ್ಲಿ 28 ಮಂದಿ ಮತ್ತು ಡಿನಿಪ್ರೊನಲ್ಲಿ ಆಸ್ಪತ್ರೆಯಲ್ಲಿ ಆರು ಮಂದಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಕೀವ್ ನಗರಾಡಳಿತವು ಮಂಗಳವಾರವನ್ನು ಶೋಕದಿನವನ್ನಾಗಿ ಘೋಷಣೆ ಮಾಡಿತ್ತು. ಮನರಂಜನಾ ಚಟುವಟಿಕೆಗಳನ್ನು ನಿಷೇಧಿಸಿ ಧ್ವಜವನ್ನು ಅರ್ಧಕ್ಕೆ ಹಾರಿಸಲಾಯಿತು.
ಹಲವು ತಿಂಗಳಲ್ಲಿಯೇ ಕೀವ್‌ನಲ್ಲಿ ನಡೆದ ಅತಿದೊಡ್ಡ ದಾಳಿ ಇದಾಗಿದ್ದು, ನಗರದ 10 ಜಿಲ್ಲೆಗಳ ಪೈಕಿ ಏಳು ಜಿಲ್ಲೆಗಳು ಹಾನಿಗೊಳಗಾಗಿವೆ. ಉಕ್ರೇನ್‌ನ ಅತಿ ದೊಡ್ಡ ಮಕ್ಕಳ ಆಸ್ಪತ್ರೆ ‘ಒಖ್ಮಾಡಿಟ್’ ಮೇಲಿನ ದಾಳಿಯು ವಿಶ್ವದ ಗಮನವನ್ನು ಸೆಳೆದಿದೆ.
ಈ ಮಧ್ಯೆ ಆಸ್ಪತ್ರೆ ಮೇಲಿನ ದಾಳಿ ಹೊಣೆ ಹೊತ್ತುಕೊಳ್ಳಲು ರಷ್ಯಾ ನಿರಾಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.