ADVERTISEMENT

ಇರಾಕ್: ಭೂಕುಸಿತದಲ್ಲಿ 7 ಮಂದಿ ಸಾವು

ಏಜೆನ್ಸೀಸ್
Published 22 ಆಗಸ್ಟ್ 2022, 11:07 IST
Last Updated 22 ಆಗಸ್ಟ್ 2022, 11:07 IST
ಅಲ್–ಇಮಾಮ್‌ ಅಲಿ ದರ್ಗಾದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾದ ರಕ್ಷಣಾ ಪಡೆ  –ಎಎಫ್‌ಪಿ ಚಿತ್ರ
ಅಲ್–ಇಮಾಮ್‌ ಅಲಿ ದರ್ಗಾದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾದ ರಕ್ಷಣಾ ಪಡೆ  –ಎಎಫ್‌ಪಿ ಚಿತ್ರ   

ಬಾಗ್ದಾದ್‌ (ಎಪಿ): ಕೇಂದ್ರ ಇರಾಕ್‌ನ ಶಿಯಾ ದರ್ಗಾದಲ್ಲಿ ಭೂಕುಸಿತ ಸಂಭವಿಸಿ ಮಗು ಸೇರಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಬಾಗ್ದಾದ್‌ನಿಂದ 80 ಕಿಲೋಮೀಟರ್‌ ದೂರದ ನಗರ ಕರ್ಬಾಲಾದ ಕತ್ತರತ್‌ ಅಲ್–ಇಮಾಮ್‌ ಅಲಿ ದರ್ಗಾದಲ್ಲಿ ಶನಿವಾರ ದುರ್ಘಟನೆ ಸಂಭವಿಸಿದೆ.

‘ನೈಸರ್ಗಿಕವಾಗಿ ತಗ್ಗು ಪ್ರದೇಶದಲ್ಲಿರುವ ದರ್ಗಾದ ಮೇಲ್ಚಾವಣಿಯುಭೂಕುಸಿತದಿಂದಾಗಿ ಕುಸಿದಿದೆ. ಪರಿಣಾಮ ಗುಹೆಯ ಒಳಗೆ ಕಲ್ಲು ಮತ್ತು ಮಣ್ಣಿನ ರಾಶಿ ತುಂಬಿದೆ. ದರ್ಗಾದ ಪ್ರವೇಶ ದ್ವಾರ, ಗೋಡೆ, ಗೋಪುರಗಳಿಗೆ ಯಾವುದೇ ಹಾನಿಯಾಗಿಲ್ಲ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಈವರೆಗೆ ಆರು ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.