ADVERTISEMENT

ಮಲೇಷ್ಯಾ: ಭೂಕುಸಿತ– ಇಬ್ಬರ ಸಾವು, 50 ಮಂದಿ ನಾಪತ್ತೆ

ರಾಯಿಟರ್ಸ್
Published 16 ಡಿಸೆಂಬರ್ 2022, 2:53 IST
Last Updated 16 ಡಿಸೆಂಬರ್ 2022, 2:53 IST
   

ಕ್ವಾಲಾಲಂಪುರ: ಮಲೇಷ್ಯಾದ ಕ್ಯಾಂಪ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಮೃತಪಟ್ಟು, 50 ಮಂದಿ ನಾಪತ್ತೆಯಾಗಿರುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ತಂಡ ಸ್ಥಳಕ್ಕೆ ದೌಡಾಯಿಸಿವೆ.

ರಾಜಧಾನಿ ಕ್ವಾಲಾಲಂಪುರ್‌ನ ಹೊರವಲಯದಲ್ಲಿರುವ ಸೆಲಂಗೋರ್‌ನಲ್ಲಿ ಬೆಳಗಿನ ಜಾವ 3 ಗಂಟೆಗೆ ಭೂಕುಸಿತ ಸಂಭವಿಸಿದೆ. ಕ್ಯಾಂಪಿಂಗ್ ಸೌಲಭ್ಯಗಳನ್ನು ಒದಗಿಸುವ ಫಾರ್ಮ್‌ಹೌಸ್ ಬಳಿಯ ರಸ್ತೆಯ ಬದಿಯಲ್ಲಿ ಕುಸಿತ ಸಂಭವಿಸಿದೆ ಎಂದು ರಾಜ್ಯ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಭೂಕುಸಿತದಲ್ಲಿ ಒಟ್ಟು 79 ಮಂದಿ ಸಿಲುಕಿದ್ದರು. ಆ ಪೈಕಿ 23 ಮಂದಿ ಸುರಕ್ಷಿತವಾಗಿದ್ಧಾರೆ ಎಂದು ಇಲಾಖೆ ತಿಳಿಸಿದೆ. ಇಬ್ಬರು ಮೃತಪಟ್ಟಿದ್ದು, 51 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅದು ಹೇಳಿದೆ.

ಕ್ಯಾಂಪ್ ಪ್ರದೇಶದಿಂದ 30 ಮೀಟರ್(100 ಅಡಿ) ಎತ್ತರದಿಂದ ಭೂಕುಸಿತ ಸಂಭವಿಸಿದ್ದು. ಒಂದು ಎಕರೆಯಷ್ಟು ಪ್ರದೇಶವನ್ನು ಆವರಿಸಿದೆ ಎಂದು ರಕ್ಷಣಾ ಇಲಾಖೆಯ ನಿರ್ದೇಶಕ ನೊರಾಜಮ್ ಖಾಮಿಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.