ADVERTISEMENT

ಆರ್ಥಿಕತೆಯ ಪುನಶ್ಚೇತನಕ್ಕೆ ಹೊಸ ರಾಷ್ಟ್ರೀಯ ಆರ್ಥಿಕ ನೀತಿ: ವಿಕ್ರಮಸಿಂಘೆ

ಪಿಟಿಐ
Published 3 ಆಗಸ್ಟ್ 2022, 11:08 IST
Last Updated 3 ಆಗಸ್ಟ್ 2022, 11:08 IST
ರಾನಿಲ್‌ ವಿಕ್ರಮಸಿಂಘೆ ಅವರು ಸಂಸತ್ತಿನ ಅಧಿವೇಶನಕ್ಕೆ ಬುಧವಾರ ಬಂದ ಕ್ಷಣ –ಎಎಫ್‌ಪಿ ಚಿತ್ರ 
ರಾನಿಲ್‌ ವಿಕ್ರಮಸಿಂಘೆ ಅವರು ಸಂಸತ್ತಿನ ಅಧಿವೇಶನಕ್ಕೆ ಬುಧವಾರ ಬಂದ ಕ್ಷಣ –ಎಎಫ್‌ಪಿ ಚಿತ್ರ    

ಕೊಲಂಬೊ: ‘ಆರ್ಥಿಕತೆಯ ಪುನಶ್ಚೇತನಕ್ಕಾಗಿ ನಮ್ಮ ಸರ್ಕಾರವು ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ನೂತನ ರಾಷ್ಟ್ರೀಯ ಆರ್ಥಿಕ ನೀತಿ ಸಿದ್ಧಪಡಿಸುತ್ತಿದೆ’ ಎಂದು ಶ್ರೀಲಂಕಾದ ನೂತನ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ತಿಳಿಸಿದ್ದಾರೆ.

‘ಬಿಕ್ಕಟ್ಟಿನಿಂದ ತತ್ತರಿಸಿರುವ ದೇಶದ ಆರ್ಥಿಕತೆಯನ್ನು ಬಲ‍ಪಡಿಸುವುದು ನಮ್ಮ ಉದ್ದೇಶ’ ಎಂದು ಹೇಳಿದ್ದಾರೆ.

ಸಂಸತ್ತಿನ ಅಧಿವೇಶನದಲ್ಲಿ ಬುಧವಾರ ಮಾತನಾಡಿದ ಅವರು, ‘ದೇಶದಲ್ಲಿ ಸರ್ವ ಪಕ್ಷಗಳ ಸರ್ಕಾರ ರಚನೆಗೆ ನೀವೆಲ್ಲಾ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ದುರಂತದ ಪರಿಸ್ಥಿತಿಯಲ್ಲಿ ನಾನು ದೇಶದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಒಂದೆಡೆ ಆರ್ಥಿಕ ಬಿಕ್ಕಟ್ಟು ಮತ್ತೊಂದೆಡೆ ನಾಗರಿಕರ ಆಕ್ರೋಶ ಮೆಟ್ಟಿನಿಲ್ಲಬೇಕಾದ ಸವಾಲು ನನ್ನೆದುರಿದೆ. ದೇಶವು ಹಿಂದೆಂದೂ ಎದುರಿಸದಂತಹ ಸಂದಿಗ್ಧತೆಯಲ್ಲಿ ಸಿಲುಕಿದೆ. ನಾವೆಲ್ಲರೂ ಅಪಾಯದಲ್ಲಿದ್ದೇವೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಇದರಿಂದ ಪಾರಾಗಬಹುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.