ADVERTISEMENT

ಲಂಕಾ: ರಾಜಪಕ್ಸ ಅಧಿಕಾರ ನಿರ್ಬಂಧಿಸುವ 21ನೇ ತಿದ್ದುಪಡಿಗೆ ಶಿಫಾರಸು

ಪಿಟಿಐ
Published 22 ಮೇ 2022, 10:58 IST
Last Updated 22 ಮೇ 2022, 10:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಲಂಬೊ(ಪಿಟಿಐ): ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರಿಗೆ ಇರುವ ಅನಿರ್ಬಂಧ ಅಧಿಕಾರಗಳ ಮೇಲೆ ನಿಯಂತ್ರಣಕ್ಕೆ ಅವಕಾಶ ನೀಡುವ ಸಂವಿಧಾನದ 21ನೇ ತಿದ್ದುಪಡಿ ಪ್ರಸ್ತಾವನೆಯ ಅನುಮೋದನೆಗಾಗಿ ಸೋಮವಾರ ಸಂಪುಟಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಸಚಿವರೊಬ್ಬರು ತಿಳಿಸಿದ್ದಾರೆ.

19ನೇ ತಿದ್ದುಪಡಿಯನ್ನು ರದ್ದುಪಡಿಸುವ ಮೂಲಕ ಸಂಸತ್ತಿಗಿಂತಲೂ ರಾಜಪಕ್ಸ ಅವರಿಗೆ ಹೆಚ್ಚಿನ ಅಧಿಕಾರಗಳನ್ನು ನೀಡಲಾಗಿತ್ತು. ಇದೀಗ 21ನೇ ತಿದ್ದುಪಡಿಯು ರಾಜಪಕ್ಸ ಅವರಿಗೆ ಇರುವ ಅನಿರ್ಬಂಧಿತ ಅಧಿಕಾರಗಳನ್ನು ರದ್ದುಪಡಿಸುವ ನಿರೀಕ್ಷೆಯಿದೆ.

ಈ ತಿದ್ದುಪಡಿಯು ದ್ವಿಪೌರತ್ವ ಹೊಂದಿದವರು ಸಂಸತ್ತು ಪ್ರವೇಶವನ್ನು ನಿರ್ಬಂಧಿಸಲಿದೆ ಎಂದು ನ್ಯಾಯ ಸಚಿವ ಡಾ.ವಿಜಯದಾಸ ರಾಜಪಕ್ಸ ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.