ADVERTISEMENT

ವಿದ್ಯುತ್‌ ಇಲ್ಲದೇ ಕತ್ತಲಲ್ಲಿ ಮುಳುಗಿದ ಇಡೀ ಲೆಬೆನಾನ್‌!

ರಾಯಿಟರ್ಸ್
Published 9 ಅಕ್ಟೋಬರ್ 2021, 12:46 IST
Last Updated 9 ಅಕ್ಟೋಬರ್ 2021, 12:46 IST
   

ಬೈರುತ್: ಇಂಧನ ಕೊರತೆಯಿಂದಾಗಿ ದೇಶದ ಎರಡು ಅತಿದೊಡ್ಡ ವಿದ್ಯುತ್ ಕೇಂದ್ರಗಳು ಸ್ಥಗಿತಗೊಂಡಿದ್ದು, ಲೆಬನಾನ್‌ನಲ್ಲಿ ವ್ಯಾಪಕ ವಿದ್ಯುತ್ ಕಡಿತವಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

'ವಿದ್ಯುತ್ ಜಾಲವು ಇಂದು ಮಧ್ಯಾಹ್ನದ ವೇಳೆಗೆ ಸಂಪೂರ್ಣವಾಗಿ ನಿಷ್ಕ್ರಿಯವಾಯಿತು.ಮುಂದಿನ ಸೋಮವಾರದವರೆಗೆ ಅಥವಾ ಹಲವು ದಿನಗಳವರೆಗೆ ಪರಿಸ್ಥಿತಿ ಹೀಗೇ ಇರಲಿದೆ‘ ಎಂದು ಅಧಿಕಾರಿಗಳುಹೇಳಿದರು.

ತಾತ್ಕಾಲಿಕವಾಗಿ ವಿದ್ಯುತ್ ಸ್ಥಾವರವನ್ನು ಚಾಲು ಮಾಡಲುಸೇನೆಯ ತೈಲ ಮೀಸಲನ್ನು ಬಳಸಲು ಪ್ರಯತ್ನಿಸಲಾಗುತ್ತಿದೆ.ಆದರೆ ಅದು ಕೂಡ ಅಂದುಕೊಂಡಷ್ಟುಶೀಘ್ರದಲ್ಲಿ ಆಗುವುದಿಲ್ಲ ಎಂದು ಗೊತ್ತಾಗಿದೆ.

ADVERTISEMENT

ಡೀಸೆಲ್ ಜನರೇಟರ್‌ಗಳ ಮೂಲಕ ಹಲವರುಪರ್ಯಾಯವಾಗಿ ವಿದ್ಯುತ್‌ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ವಿದ್ಯುತ್‌ ಕಡಿತದ ಹಿನ್ನೆಲೆಯಲ್ಲಿ ಇಡೀ ಲೆಬೆನಾನ್‌ ಅಂಧಕಾರದಲ್ಲಿ ಮುಳುಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.