ADVERTISEMENT

ರಣತುಂಗಾ ತಮ್ಮನಿಗೆ 2 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 14:15 IST
Last Updated 6 ಜೂನ್ 2022, 14:15 IST

ಕೊಲಂಬೊ (ಪಿಟಿಐ): ಶ್ರೀಲಂಕಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಅರ್ಜುನ ರಣತುಂಗಾ ಅವರ ತಮ್ಮ, ಸಚಿವರೂ ಆಗಿರುವ ಪ್ರಸನ್ನ ರಣತುಂಗಾ ಅವರಿಗೆ ಸುಲಿಗೆ ಪ್ರಕರಣದಲ್ಲಿ ಇಲ್ಲಿನ ಹೈಕೋರ್ಟ್ ಎರಡು ವರ್ಷ ಜೈಲು ವಿಧಿಸಿದೆ.

ಉದ್ಯಮಿಯೊಬ್ಬರನ್ನು ಬೆದರಿಸಿ ಸುಲಿಗೆ ಮಾಡಿದ್ದ ಆರೋಪದಡಿ 55 ವರ್ಷದ ಪ್ರಸನ್ನ ವಿರುದ್ಧ 2015 ರಲ್ಲಿ ಪ್ರಕರಣ ದಾಖಲಾಗಿತ್ತು. ಅಪರಾಧ ಸಾಬೀತಾಗಿರುವುದರಿಂದ ಶಿಕ್ಷೆ ವಿಧಿಸಿದೆ.

₹ 53 ಲಕ್ಷ ದಂಡ ಮತ್ತು ಸಂತ್ರಸ್ತ ಉದ್ಯಮಿಗೆ ಪರಿಹಾರವಾಗಿ ₹ 2.14 ಲಕ್ಷ ಪಾವತಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಆರೋಪಿಯಾಗಿದ್ದ, ಪ್ರಸನ್ನ ಅವರ ಪತ್ನಿಯನ್ನು ದೋಷಮುಕ್ತಗೊಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.