ADVERTISEMENT

ನೀರವ್ ಮೋದಿ ಬಂಧನಕ್ಕೆ ಲಂಡನ್ ನ್ಯಾಯಾಲಯ ವಾರಂಟ್

ಪಿಟಿಐ
Published 18 ಮಾರ್ಚ್ 2019, 16:17 IST
Last Updated 18 ಮಾರ್ಚ್ 2019, 16:17 IST
   

ಲಂಡನ್: ಭಾರತದಲ್ಲಿ ಬಹುಕೋಟಿ ರೂಪಾಯಿ ವಂಚಿಸಿ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಆಭರಣ ವಿನ್ಯಾಸಕಾರ ನೀರವ್ಮೋದಿ ವಿರುದ್ಧ ಲಂಡನ್ ನ ವೆಸ್ಟ್ ಮಿನಿಸ್ಟರ್ ಮ್ಯಾಜೆಸ್ಟ್ರೇಟ್ ಕೋರ್ಟ್ ವಾರಂಟ್ ಹೊರಡಿಸಿದೆ.

ಭಾರತದ ಮನವಿ ಮೇರೆಗೆ ಲಂಡನ್ ನ್ಯಾಯಾಲಯ ಈ ವಾರಂಟ್ ಹೊರಡಿಸಿದೆ. ಲಂಡನ್ ನ ನ್ಯಾಯಾಲಯದ ಆದೇಶದಂತೆ ಅಲ್ಲಿನ ಪೊಲೀಸರು ನೀರವ್ ನನ್ನ ಬಂಧಿಸಬಹುದಾಗಿದೆ. ಆತ ಅಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸುದ್ದಿ ಸಂಸ್ಥೆ ವರದಿಮಾಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ರೂಪಾಯಿ ವಂಚಿಸಿರುವ ಪ್ರಕರಣದಲ್ಲಿನೀರವ್ ಮೋದಿ ಪ್ರಮುಖಆರೋಪಿಯಾಗಿದ್ದು, ಈತನ ಚಿಕ್ಕಪ್ಪ ಮೆಹೂಲ್ ಚೋಕ್ಸಿ ಎರಡನೆ ಆರೋಪಿಯಾಗಿದ್ದಾನೆ.

ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ನೀರವ್ ಮೋದಿ ಇತ್ತೀಚೆಗಷ್ಟೇ ಲಂಡನ್ ರಸ್ತೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ. ಆ ಸಮಯದಲ್ಲಿ ಲಂಡನ್ ನ ಮಾಧ್ಯಮಕ್ಕೆ ಸಿಕ್ಕಿಬಿದ್ದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಆಧರಿಸಿ ಭಾರತದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಲಂಡನ್ ಅಧಿಕಾರಿಗಳನ್ನ ಸಂಪರ್ಕಿಸಿ ನೀರವ್ ಮೋದಿ ಬಂಧನಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದರು.ಭಾರತದಿಂದ ತಲೆಮರೆಸಿಕೊಂಡ ನಂತರ ನೀರವ್ ಮೋದಿ ಲಂಡನ್ ನಲ್ಲಿ ದುಬಾರಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.