

ಪ್ಯಾರಿಸ್: ಇಲ್ಲಿನ ವಿಶ್ವವಿಖ್ಯಾತ ಲೂವ್ರಾ ಮ್ಯೂಸಿಯಂನಲ್ಲಿನ ಅತ್ಯಮೂಲ್ಯ ವಸ್ತುಗಳನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪ್ಯಾರಿಸ್ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
31ರಿಂದ 40 ವಯಸ್ಸಿನ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಬಂಧಿಸಲಾಗಿದೆ. ದರೋಡೆಯಲ್ಲಿ ಈ ನಾಲ್ವರ ಪಾತ್ರವೇನು ಎಂಬುದನ್ನು ಅವರು ತಿಳಿಸಿಲ್ಲ. ಪೊಲೀಸರು ಆರೋಪಿಗಳನ್ನು 96 ಗಂಟೆಗಳ ಕಾಲ ವಿಚಾರಣೆ ನಡೆಸಬಹುದು ಎಂದು ಪ್ರಾಸಿಕ್ಯೂಟರ್ ಲಾರ್ ಬೆಕುವಾ ಅವರು ತಿಳಿಸಿದ್ದಾರೆ.
ಲೂವ್ರಾ ಮ್ಯೂಸಿಯಂನ ಮಹಡಿಯ ಕಿಟಕಿಗಳನ್ನು ಒಡೆದು ಅಕ್ಟೋಬರ್ 19ರಂದು ಒಳನುಸುಳಿದ್ದ ದರೋಡೆಕೋರರು, ಮೂರನೇ ನೆಪೊಲಿಯನ್ ಪತ್ನಿಯ ಕಿರೀಟ, ಆಭರಣಗಳು ಸೇರಿದಂತೆ 102 ಮಿಲಿಯನ್ ಡಾಲರ್ (₹895 ಕೋಟಿ) ಮೌಲ್ಯದ ಎಂಟು ವಸ್ತುಗಳನ್ನು ದರೋಡೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.