ಬೋಸ್ಟನ್:ಚಂದ್ರ ಉಪಗ್ರಹದಿಂದ ಉದುರಿದ 5.5 ಕೆ.ಜಿ. ತೂಕದ ಉಲ್ಕಾಶಿಲೆಯೊಂದು ₹ 4.41 ಕೋಟಿಗೆ (612,500 ಅಮೆರಿಕನ್ ಡಾಲರ್) ಹರಾಜಾಗಿದೆ.ವಿಯೆಟ್ನಾಂನ ಹಾ ನಮ್ ಪ್ರಾಂತ್ಯದ ಟಾಮ್ ಚುಕ್ ಪಗೊಡಾ ಸಂಸ್ಥೆ ಇದನ್ನು ಖರೀದಿಸಿದೆ.
6 ಸಣ್ಣ ತುಣಕುಗಳು ಸೇರಿ ಈ ಉಲ್ಕಾಶಿಲೆ ರೂಪುಗೊಂಡಿದ್ದು, ಒಂದಕ್ಕೊಂದು ಅಂಟಿಕೊಂಡು ಕಗ್ಗಂಟಾಗಿವೆ. ಈ ಉಲ್ಕಾಶಿಲೆಗೆ ವೈಜ್ಞಾನಿಕವಾಗಿ ‘ಎನ್‌ಡಬ್ಲ್ಯುಎ 11789 ಲೂನಾರ್ ಫೆಲ್ಡ್‌ಸ್ಪ್ಯಾತಿಕ್ ಬ್ರೇಸಿಯಾ‘ ಎಂಬ ಹೆಸರಿಡಲಾಗಿದೆ. ಆದರೆ, ಸಾಮಾನ್ಯವಾಗಿ ‘ಬೌಗಾಬಾ’ ಅಥವಾ ‘ಚಂದ್ರನ ಒಗಟು’ ಎಂದು ಕರೆಯಲಾಗುತ್ತಿದೆ.
ಎಲ್ಲ ಅಡೆ–ತಡೆಗಳನ್ನು ದಾಟಿ ವಾಯವ್ಯ ಆಫ್ರಿಕಾದ ಮರುಭೂಮಿಯಲ್ಲಿ ಬಿದ್ದಿತ್ತು.
‘ಬಹಳ ಮುಖ್ಯವಾದ ಉಲ್ಕಾಶಿಲೆಯೊಂದು ನಮಗೆ ದೊರೆತಿದೆ. ಭೂಮಿಯ ಉಪಗ್ರಹವಾದ ಚಂದ್ರನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ಅತಿ ಸೂಕ್ತವಾದ ಜಾಗದಲ್ಲಿ ಇದನ್ನು ಪ್ರದರ್ಶನಕ್ಕಿಡಲಾಗುವುದು’ ಎಂದು ಟಾಮ್ ಚುಕ್ ಸಂಸ್ಥೆ ಹೇಳಿದೆ.
‘ಭವಿಷ್ಯದ ವಿಜ್ಞಾನ ವಿದ್ಯಾರ್ಥಿಗಳನ್ನು ಇದು ಆಕರ್ಷಿಸುವುದರಲ್ಲಿ ಅನುಮಾನವಿಲ್ಲ’ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.