ADVERTISEMENT

ಚೀನಾದಲ್ಲಿ ಭೂಕಂಪ: 11 ಮಂದಿ ಸಾವು, 122 ಜನರಿಗೆ ಗಾಯ

6.0 ತೀವ್ರತೆಯ ಕಂಪನ

ಏಜೆನ್ಸೀಸ್
Published 18 ಜೂನ್ 2019, 4:42 IST
Last Updated 18 ಜೂನ್ 2019, 4:42 IST
ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಪ‍್ರಗತಿಯಲ್ಲಿದೆ –ರಾಯಿಟರ್ಸ್‌ ಚಿತ್ರ
ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಪ‍್ರಗತಿಯಲ್ಲಿದೆ –ರಾಯಿಟರ್ಸ್‌ ಚಿತ್ರ   

ಬೀಜಿಂಗ್:ದಕ್ಷಿಣ ಚೀನಾದ ಸಿಚುವಾನ್‌ ಪ್ರಾಂತ್ಯದಯಿಬಿನ್‌ ನಗರದಲ್ಲಿ ಸೋಮವಾರ ರಾತ್ರಿ ಭೂಕಂಪ ಸಂಭವಿಸಿ11 ಜನ ಮೃತಪಟ್ಟಿದ್ದಾರೆ. 122 ಜನ ಗಾಯಗೊಂಡಿದ್ದಾರೆ ಎಂದು ಸ್ಥಳೀಯಾಡಳಿತ ತಿಳಿಸಿದೆ.

ಚಾಂಗ್‌ನಿಂಗ್ ಕೌಂಟಿಯಲ್ಲಿ ಹೋಟೆಲೊಂದರ ಕಟ್ಟಡ ಕುಸಿದುಬಿದ್ದಿದ್ದು, ರಸ್ತೆಗಳು ಬಿರಕುಬಿಟ್ಟಿವೆ ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಅವಶೇಷಗಳಡಿ ಸಿಲುಕಿರುವವರರಕ್ಷಣಾ ಕಾರ್ಯಾಚರಣೆ ಪ‍್ರಗತಿಯಲ್ಲಿದೆ.

ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.0ರಷ್ಟು ದಾಖಲಾಗಿದೆ ಎಂದು ಸರ್ಕಾರದ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರಕಟಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.