ಬೀಜಿಂಗ್: ಮಧ್ಯ ಚೀನಾದ ನಗರ ಚಂಗ್ಷಾದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ದಟ್ಟ ಹೊಗೆ ಆಗಸದ ಎತ್ತರಕ್ಕೆ ವ್ಯಾಪಿಸಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಈವರೆಗೆ, ಸಾವು ನೋವಿನ ಸಂಖ್ಯೆ ತಿಳಿದುಬಂದಿಲ್ಲ. ಬೃಹತ್ ಕಟ್ಟಡದ ಹತ್ತಾರು ಮಹಡಿಗಳು ಬೆಂಕಿಯಲ್ಲಿ ದಹಿಸುತ್ತಿರುವುದು ಕಂಡುಬಂದಿದೆ. ಇಡೀ ಪ್ರದೇಶದಲ್ಲಿ ಹೊಗೆ ಆವರಿಸಿದೆ ಎಂದು ಅದು ಹೇಳಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.