ADVERTISEMENT

‘ಸುಡೊಕು ಪಿತಾಮಹ’ ಮಕಿ ಕಾಜಿ ನಿಧನ

ಏಜೆನ್ಸೀಸ್
Published 18 ಆಗಸ್ಟ್ 2021, 11:33 IST
Last Updated 18 ಆಗಸ್ಟ್ 2021, 11:33 IST
ಮಕಿ ಕಾಜಿ
ಮಕಿ ಕಾಜಿ   

ಟೋಕಿಯೊ: ‘ಸುಡೊಕು ಪಿತಾಮಹ’ ಎಂದು ಕರೆಯಲಾಗುತ್ತಿದ್ದ ಮಕಿ ಕಾಜಿ (69) ಕ್ಯಾನ್ಸರ್‌ ಕಾಯಿಲೆಯಿಂದ ನಿಧನರಾಗಿದ್ದಾರೆ.

ಜಗತ್ತಿನಾದ್ಯಂತ ಲಕ್ಷಾಂತರ ಜನರಿಂದ ಸುಡುಕೊ ಮೆಚ್ಚುಗೆ ಪಡೆದಿದೆ. ಸುಡುಕೊ ಜನಪ್ರಿಯಗೊಳಿಸುವಲ್ಲಿ ಕಾಜಿ ಮಹತ್ವದ ಪಾತ್ರ ವಹಿಸಿದ್ದರು.

‘ಆಗಸ್ಟ್‌ 10ರಂದೇ ಮಕಿ ಕಾಜಿ ಅವರು ನಿಧನರಾಗಿದ್ದಾರೆ’ ಎಂದು ಅವರ ಜಪಾನ್‌ನ ಪ್ರಕಾಶಕ ನಿಕೊಲಿ ತಿಳಿಸಿದ್ದಾರೆ.

ADVERTISEMENT

ಸಂಖ್ಯಾ ಆಧಾರಿತ ಸುಡುಕೊ ಅನ್ನು ಸ್ವಿಟ್ಜರ್ಲೆಂಡ್‌ನ ಗಣಿತ ತಜ್ಞ ಲೆಯಾನ್ ಹಾರ್ಡ್‌ ಯುಲೆರ್‌ 18ನೇ ಶತಮಾನದಲ್ಲಿ ಮೊದಲು ರಚಿಸಿದ್ದರು. ಆಧುನಿಕ ಆವೃತ್ತಿಯ ಸುಡುಕೊಗೆ ಅಮೆರಿಕದಲ್ಲಿ ಹೊಸ ರೂಪ ನೀಡಲಾಯಿತು. ಆದರೆ, ಕಾಜಿ ಅವರಿಗೆ ಸುಡುಕೊವನ್ನು ಜನಪ್ರಿಯಗೊಳಿಸಿದ ಖ್ಯಾತಿ ಸಲ್ಲುತ್ತದೆ.

ಕಾಜಿ ಅವರೇ ಸುಡುಕೊ ಹೆಸರಿಟ್ಟಿದ್ದರು ಎಂದು ಹೇಳಲಾಗಿದೆ. ಜಪಾನ್‌ನಲ್ಲಿ ಸುಡುಕೊ ಎಂದರೆ ಪ್ರತಿಯೊಂದು ಸಂಖ್ಯೆಯೂ ಒಂದೇ ಅಂಕಿಯಾಗಿರಬೇಕು ಎನ್ನುವ ಅರ್ಥವನ್ನು ನೀಡುತ್ತದೆ.

1980ರಲ್ಲಿ ಅಮೆರಿಕದ ನಿಯತಕಾಲಿಕೆಯಲ್ಲಿ ಸುಡುಕೊ ನೋಡಿದ್ದ ನಿಕೊಲಿ ಅವರು ಜಪಾನ್‌ಗೆ ತಂದು ಪರಿಚಯಿಸಿದರು. ದಶಕಗಳ ಬಳಿಕ ಇದು ಯುರೋಪ್‌ ಮತ್ತು ಅಮೆರಿಕದಲ್ಲಿ ಪರಿಚಯವಾಯಿತು. 2005ರಲ್ಲಿ ಬಿಬಿಸಿ ಈ ‘ಪಝಲ್‌’ ಅನ್ನು ಪ್ರಕಟಿಸಲು ಆರಂಭಿಸಿತು.

ಹೊಸ ‘ಪಝಲ್‌’ ಸೃಷಿಸುವುದು ನಿಧಿಯನ್ನು ಪತ್ತೆ ಮಾಡಿದಂತಾಗುತ್ತದೆ ಎಂದು ಕಾಜಿ ಅವರು 2007ರಲ್ಲಿ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.