ADVERTISEMENT

ಗಡಿಪಾರಿನಿಂದ ತಪ್ಪಿಸಿಕೊಳ್ಳಲು ವಕೀಲರನ್ನೇ ನಂಬಿರುವ ಮಲ್ಯ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 18:20 IST
Last Updated 8 ಡಿಸೆಂಬರ್ 2018, 18:20 IST
ಮಲ್ಯ
ಮಲ್ಯ   

ನವದೆಹಲಿ:ಭಾರತಕ್ಕೆ ಗಡಿಪಾರು ಆಗುವುದರಿಂದ ತಪ್ಪಿಸಿಕೊಳ್ಳಲು ಉದ್ಯಮಿ ವಿಜಯ್ ಮಲ್ಯ ಅವರು ತಮ್ಮ ವಕೀಲೆ ಕ್ಲಾರ್‌ ಮಾಂಟೆಗೊಮೆರಿ ಅವರನ್ನೇ ನಂಬಿಕೊಂಡಿದ್ದಾರೆ. ಚಿಲಿಯ ಮಾಜಿ ಸರ್ವಾಧಿಕಾರಿ ಅಗಸ್ಟೊ ಪಿನೊಷೆಟ್, ಥಾಯ್ಲೆಂಡ್‌ನ ಮಾಜಿ ಪ್ರಧಾನಿ ತಕ್ಸಿನ್, ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ ಗಡಿಪಾರು ಪ್ರಕರಣಗಳಲ್ಲಿ ಅವರ ಪರ ಕ್ಲಾರ್ ವಕಾಲತ್ತು ವಹಿಸಿದ್ದರು. ಗಡಿಪಾರು ಪ್ರಕರಣಗಳಲ್ಲೇ ಕ್ಲಾರ್ ಅವರು ಪರಿಣಿತಿ.

ಕ್ಲಾರ್‌ ವಹಿಸಿಕೊಂಡ ಪ್ರಕರಣಗಳಲ್ಲಿ ಬಹುತೇಕ ಜಯಗಳಿಸಿದ್ದಾರೆ. ಈಗ ಮಲ್ಯ ಅವರ ಪ್ರಕರಣವನ್ನೂ ಅವರೇ ನಿರ್ವಹಿಸುತ್ತಿದ್ದಾರೆ. ಈ ಪ್ರಕರಣದ ತೀರ್ಪು ಸೋಮವಾರ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT