ADVERTISEMENT

ಕೆನಡಾ: ವಿಮಾನ ನಿಲ್ದಾಣದ ಬಳಿ ಗುಂಡಿನ ದಾಳಿ

ರೌಡಿಗಳ ನಡುವಿನ ಗಲಾಟೆ–ಪೊಲೀಸರ ಹೇಳಿಕೆ

ಏಜೆನ್ಸೀಸ್
Published 10 ಮೇ 2021, 5:40 IST
Last Updated 10 ಮೇ 2021, 5:40 IST
ವ್ಯಾಂಕೊವರ್ ಏರ್‌ಪೋರ್ಟ್‌ವ (ಪ್ರಾತಿನಿಧಿಕ ಚಿತ್ರ)
ವ್ಯಾಂಕೊವರ್ ಏರ್‌ಪೋರ್ಟ್‌ವ (ಪ್ರಾತಿನಿಧಿಕ ಚಿತ್ರ)   

ರಿಚ್‌ಮಂಡ್‌ (ಕೆನಡಾ): ಇಲ್ಲಿನ ವ್ಯಾಂಕೋವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ಟರ್ಮಿನ್‌ ಬಳಿ ಭಾನುವಾರ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಈ ಘಟನೆಯನ್ನು ಐಎಚ್‌ಐ ತನಿಖಾ ತಂಡ ದೃಢಪಡಿಸಿದೆ. ಇದು ರೌಡಿಗಳ ಗುಂಪಿಗೆ ಸಂಬಂಧಿಸಿದ ಘಟನೆ ಎಂದು ತಿಳಿದುಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆ ನಂತರ ಪೊಲೀಸರು ಶಂಕಿತರನ್ನು ಹಿಂಬಾಲಿಸಿ ಅವರ ಮೇಲೆ ಗುಂಡು ಹಾರಿಸಿದ್ದಾರೆ.

’ಮಧ್ಯಾಹ್ನ 3 ಗಂಟೆಯ ನಂತರ ಶಂಕಿತರು ಹೋಗುತ್ತಿದ್ದ ಗೇಟ್‌ ವೇ ಕಾರ್ ಅಧಿಕಾರಿಗಳು ವಿಮಾನ ನಿಲ್ದಾಣದ ಬಳಿ ತಡೆದಿದ್ದಾರೆ. ಆಗ ಕಾರಿನಲ್ಲಿದ್ದವರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಕಾರಿನಲ್ಲಿದ್ದವರು ತಪ್ಪಿಸಿಕೊಂಡರು. ಪೊಲೀಸ್ ಅಧಿಕಾರಿಗಳಿಗೆ ಯಾವುದೇ ಗಾಯಗಳಾಗಿಲ್ಲ‘ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ತಿಳಿಸಿದ್ದಾರೆ.

ADVERTISEMENT

ವಿಮಾನನಿಲ್ದಾಣ ಸುರಕ್ಷಿತವಾಗಿದೆ, ಪ್ರಯಾಣಿಕರು ಆತಂಕಪಡಬೇಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.