ADVERTISEMENT

ಸುಡಾನ್: ಆಸ್ಪತ್ರೆ ಮೇಲೆ ಡ್ರೋನ್‌ ದಾಳಿ, 30 ಸಾವು

ಏಜೆನ್ಸೀಸ್
Published 25 ಜನವರಿ 2025, 13:48 IST
Last Updated 25 ಜನವರಿ 2025, 13:48 IST
<div class="paragraphs"><p>ಮಮನ</p></div>

ಮಮನ

   

ಪೋರ್ಟ್‌ ಸುಡಾನ್(ಸುಡಾನ್): ಸುಡಾನ್‌ನ ಡಾರ್ಫುರ್ ಪ್ರದೇಶದ ಎಲ್‌–ಫಷರ್‌ ಎಂಬಲ್ಲಿನ ಆಸ್ಪತ್ರೆ ಮೇಲೆ ಡ್ರೋನ್‌ ಬಳಸಿ ನಡೆಸಿದ ಬಾಂಬ್‌ ದಾಳಿಯಲ್ಲಿ 30 ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಮೂಲಗಳು ಶನಿವಾರ ಹೇಳಿವೆ.

ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮೇಲೆ ಶುಕ್ರವಾರ ಸಂಜೆ ಈ ದಾಳಿ ನಡೆದಿದ್ದು, ವಿಭಾಗದ ಕಟ್ಟಡ ಸಂಪೂರ್ಣ ನಾಶವಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಹಲವು ಸಂಘಟನೆಗಳ ನಡುವೆ ಇಲ್ಲಿ ನಿರಂತರ ಕಾಳಗ ನಡೆಯುತ್ತಿದ್ದು, ಯಾವ ಸಂಘಟನೆ ಈ ದಾಳಿ ನಡೆಸಿದೆ ಎಂಬುದು ಸ್ಪಷ್ಟವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.