ಕೊಚನಿ ನಗರದಲ್ಲಿ ದುರಂತ ಸಂಭವಿಸಿದ ನೈಟ್‌ಕ್ಲಬ್ ಬಳಿ ರಕ್ಷಣಾ ಕಾರ್ಯಾಚರಣೆ
ರಾಯಿಟರ್ಸ್ ಚಿತ್ರ
ಸ್ಕೋಪ್ಜೆ(ನಾರ್ತ್ ಮೆಸಿಡೋನಿಯಾ): ಉತ್ತರ ಮೆಸಿಡೋನಿಯಾದ ಪೂರ್ವ ಪಟ್ಟಣ ಕೊಕಾನಿಯದ ನೈಟ್‌ಕ್ಲಬ್‌ನಲ್ಲಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 59 ಜನರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಪಲ್ಸ್ ನೈಟ್‌ಕ್ಲಬ್‌ನಲ್ಲಿ ಪಾಪ್ ಸಂಗೀತ ಕಛೇರಿ ನಡೆಯುತ್ತಿತ್ತು. ನಸುಕಿನ 2.35ರ ಸುಮಾರಿಗೆ ಬಾಣಬಿರುಸು ಗಳಿಂದ ಕ್ಲಬ್ ಛಾವಣಿಗೆ ಬೆಂಕಿ ಹೊತ್ತಿಕೊಂಡು, ಈ ಅವಘಡ ಸಂಭವಿಸಿದೆ ಎಂದು ಗೃಹ ಸಚಿವ ಪಾಂಚೆ ತೋಷ್ಕೊವ್‌ಸ್ಕಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹಲವು ಜನರಿಗೆ ಸುಟ್ಟ ಗಾಯಗಳಾಗಿವೆ. 118 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಸಚಿವ ಅರ್ಬೆನ್ ತಾರವಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.