ADVERTISEMENT

ಉಗಾಂಡದಲ್ಲಿ ಬಸ್ ಅಫಘಾತ: 20 ಮಂದಿ ಸಾವು

ಏಜೆನ್ಸೀಸ್
Published 4 ಮೇ 2022, 13:23 IST
Last Updated 4 ಮೇ 2022, 13:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಂಪಾಲಾ (ಉಗಾಂಡ): ಉಗಾಂಡಾದ ಪಶ್ಚಿಮ ಭಾಗದಲ್ಲಿ ಬುಧವಾರ ಬೆಳಿಗ್ಗೆ ಬಸ್ಸೊಂದು ಚಹಾ ತೋಟವೊಂದಕ್ಕೆ ನುಗ್ಗಿದ ಬಸ್‌ ಉರುಳಿ ಬಿದ್ದುದರಿಂದ 20 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.

ಈ ಬಸ್‌ ಫೋರ್ಟ್ ಪೋರ್ಟಲ್‌ ನಗರದಿಂದ ಕಂಪಾಲಾದತ್ತ ತೆರಳುತ್ತಿತ್ತು. ಇತ್ತೀಚಿನ ದಿನಗಳಲ್ಲೇ ದೇಶದಲ್ಲಿ ಸಂಭವಿಸಿದ ಭೀಕರ ಅಪಘಾತ ಇದಾಗಿದ್ದು, ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಉಗಾಂಡಾದಲ್ಲಿ ರಸ್ತೆಗಳ ಪರಿಸ್ಥಿತಿ ಉತ್ತಮವಾಗಿಲ್ಲ, ಹೀಗಾಗಿ ಇಂತಹ ಅಪಘಾತಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.