ಕರಾಚಿ: ರಾವಲ್ಪಿಂಡಿಗೆ ಹೊರಟಿದ್ದ ರೈಲಿನ 5 ಬೋಗಿಗಳು ಹಳಿತಪ್ಪಿದ್ದು, 22 ಮಂದಿ ಮೃತಪಟ್ಟಿದ್ದಾರೆ.
ಕರಾಚಿಯಿಂದ ರಾವಲ್ಪಿಂಡಿಗೆ ತೆರಳುತ್ತಿದ್ದ ಹಜಾರ ಎಕ್ಸ್‌ಪ್ರೆಸ್ ರೈಲು ನವಾಬ್ ಶಾ ಪ್ರದೇಶದ ಸರ್ಹಾರಿ ರೈಲು ನಿಲ್ದಾಣದ ಬಳಿ ಹಳಿ ತಪ್ಪಿದೆ.
ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಗಾಯಗೊಂಡಿರುವ 50 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪಾಕಿಸ್ತಾನ ರೈಲ್ವೆಯ ಅಧಿಕಾರಿ ಮೆಹಮೂದ್ ರೆಹಮಾನ್ ತಿಳಿಸಿದ್ದಾರೆ.
ಸುದ್ದಿ ವಾಹಿನಿಗಳಲ್ಲಿ ಅಪಘಾತದ ದೃಶ್ಯ ಪ್ರಸಾರವಾಗಿದ್ದು, ಬೋಗಿಗಳು ತೀವ್ರ ಹಾನಿಗೊಳಗಾಗಿರುವುದು ಕಂಡುಬಂದಿದೆ. ಹಳಿ ತಪ್ಪಿದ ಬೋಗಿಗಳಿಂದ ಜನರನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ.
‘ಸದ್ಯ ರಕ್ಷಣಾ ಕಾರ್ಯಾಚರಣೆ ಮೇಲಷ್ಟೇ ನಮ್ಮ ಗಮನ. ಹಳಿ ತಪ್ಪಿದ ಬೋಗಿಗಳಿಂದ ಜನರನ್ನು ರಕ್ಷಿಸುವುದೇ ನಮ್ಮ ಆದ್ಯತೆ’ ಎಂದೂ ರೆಹಮಾನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.