ADVERTISEMENT

ಬರೆದಿಟ್ಟುಕೊಳ್ಳಿ, ಚುನಾವಣೆ ಮುಂದೂಡಲಿದ್ದಾರೆ ಟ್ರಂಪ್‌: ಜೊ ಬಿಡೆನ್‌ 

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 13:27 IST
Last Updated 24 ಏಪ್ರಿಲ್ 2020, 13:27 IST
   

ವಾಷಿಂಗ್ಟನ್‌: ಅಮೆರಿಕದಲ್ಲಿ ನವೆಂಬರ್‌ನಲ್ಲಿ ನಡೆಯಬೇಕಾದ ಅಧ್ಯಕ್ಷೀಯ ಚುನಾವಣೆಯನ್ನು ಡೊನಾಲ್ಡ್ ಟ್ರಂಪ್ ಮುಂದೂಡಲು ಪ್ರಯತ್ನಿಸಲಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬಿಡನ್ ಭವಿಷ್ಯ ನುಡಿದಿದ್ದಾರೆ.

‘ನನ್ನ ಮಾತುಗಳನ್ನು ಗುರುತು ಮಾಡಿಟ್ಟುಕೊಳ್ಳಿ. ಚುನಾವಣೆಯನ್ನು ಯಾಕೆ ತಡೆಯಬಾರದು ಎಂಬುದರತ್ತ ಟ್ರಂಪ್‌ ಈಗಾಗಲೇ ಯೋಚನೆ ಮಾಡಿರುತ್ತಾರೆ,’ ಎಂದು ಬಿಡೆನ್ ಹೇಳಿದರು.

ಅಲ್ಲದೆ, ‘ಚುನಾವಣೆಯನ್ನು ಮುಂದೂಡುವುದೇ ಗೆಲುವಿಗೆ ಇರುವ ಏಕೈಕ ದಾರಿ ಎಂದು ಟ್ರಂಪ್‌ ಭಾವಿಸಿರಬಹುದು,’ ಎಂದು ಅವರು ಹೇಳಿದ್ದಾರೆ.

ADVERTISEMENT

ಕೊರೊನಾ ವೈರಸ್‌ ಅಮೆರಿಕದಲ್ಲಿ ಸಾಂಕ್ರಾಮಿಕಗೊಂಡಿದೆ. ಇದರ ನಡುವೆಯೇ ಉದ್ಯೋಗ ನಷ್ಟವಾಗುತ್ತಿದೆ. ಹೀಗಾಗಿ ಟ್ರಂಪ್‌ ಅವರ ಗೆಲುವಿನ ಹಾದಿ ನಿರೀಕ್ಷಿಸಿದ್ದಕ್ಕಿಂತ ಕಠಿಣವಾಗಬಹುದು ಎಂಬ ವ್ಯಾಖ್ಯಾನಗಳು ಕೇಳಿಬಂದಿವೆ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನವಂಬರ್‌ನಲ್ಲಿ ನಿಗದಿಯಾಗಿದೆ. ಡೆಮಕ್ರಟಿಕ್‌ ಪಕ್ಷದಿಂದ ಜೊ ಬಿಡೆನ್‌ ಅವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.