ಲಾಹೋರ್: 2023 ಮೇ9ರ ಗಲಭೆ ವೇಳೆ ಪಿಎಂಎಲ್–ಎನ್ ಪಕ್ಷದ ಹಿರಿಯ ನಾಯಕರ ನಿವಾಸವನ್ನು ಧ್ವಂಸಗೊಳಿಸಿದ್ದ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ 75 ಮಂದಿ ನಾಯಕರು ಹಾಗೂ ಕಾರ್ಯಕರ್ತರಿಗೆ 3ರಿಂದ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಫೈಸಲಾಬಾದ್‌ನ ಭಯೋತ್ಪಾದನಾ ನಿಗ್ರಹ ಪ್ರಕರಣಗಳ ನ್ಯಾಯಾಲಯವು (ಎಟಿಸಿ) 59 ಮಂದಿಗೆ 10 ವರ್ಷಗಳ ಹಾಗೂ 16 ಮಂದಿಗೆ 3 ವರ್ಷಗಳ ಶಿಕ್ಷೆ ಘೋಷಿಸಿದ್ದು, 34 ಮಂದಿಯನ್ನು ಖುಲಾಸೆಗೊಳಿಸಿದೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದ 109 ಆರೋಪಿಗಳಲ್ಲಿ 75 ಮಂದಿಗೆ ಶಿಕ್ಷೆ ಘೋಷಿಸಿದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷೆಗೆ ಒಳಗಾದವರ ಪೈಕಿ ಸಂಸತ್ತಿನ ಕೆಳಮನೆ ನ್ಯಾಷನಲ್ ಅಸೆಂಬ್ಲಿಯ ವಿರೋಧ ಪಕ್ಷದ ಮಾಜಿ ನಾಯಕರಾಗಿದ್ದ ಒಮರ್ ಆಯುಬ್, ಮೇಲ್ಮನೆ ಸೆನೆಟ್‌ನ ಪ್ರತಿಪಕ್ಷ ನಾಯಕರಾಗಿದ್ದ ಶಿಬ್ಲಿ ಫ್ರಾಜ್, ಮಾಜಿ ಶಾಸಕರಾದ ಜರ್ತಾಜ್ ಗುಲ್, ಅಹ್ಮದ್ ಛಾಥಾ ಖಾನ್ ಸೊಹ್ನಾ, ಶೇಖ್ ರಶೀದ್ ಷಫೀಕ್ ಹಾಗೂ ಕನ್ವರ್ ಶೌಜಾಬ್ ಕೂಡ ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.