ADVERTISEMENT

ಮೆಲ್ಬರ್ನ್‌: ಹದಗೆಟ್ಟ ವಾಯು ಗುಣಮಟ್ಟ

ಪಿಟಿಐ
Published 14 ಜನವರಿ 2020, 20:01 IST
Last Updated 14 ಜನವರಿ 2020, 20:01 IST

ಮೆಲ್ಬರ್ನ್‌ : ‘ವಿನಾಶಕಾರಿಕಾಳ್ಗಿಚ್ಚಿನಿಂದ ಮೆಲ್ಬರ್ನ್‌ನಲ್ಲಿ ವಾಯುಗುಣಮಟ್ಟ ತೀರ ಹದಗೆಟ್ಟಿದ್ದು, ವಿಶ್ವದಲ್ಲಿಯೇ ಅತಿ ಕಳಪೆ ಮಟ್ಟಕ್ಕೆ ತಲುಪಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರೋರಾತ್ರಿ ವಾಯು ಗುಣಮಟ್ಟ ಕುಸಿದಿದೆ.ಆರೋಗ್ಯದ ದೃಷ್ಟಿಯಿಂದ ಜನರು ಮನೆಯ ಒಳಗೆ ಇರುವುದರ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಚ್ಚರಿಸಲಾಗಿದೆ.

ಇತಿಹಾಸದಲ್ಲಿಯೇ ಮೊದಲ ಬಾರಿಗೆಆಸ್ಟ್ರೇಲಿಯಾದಲ್ಲಿ ತೀವ್ರತರದಲ್ಲಿ ಕಾಳ್ಗಿಚ್ಚು ವ್ಯಾಪಿಸಿದ್ದು, 26 ಜನರು ಮೃತಪಟ್ಟಿದ್ದರು. ಅಂದಾಜು 2 ಸಾವಿರ ಮನೆಗಳು ಹಾನಿಗೊಂಡಿವೆ.

ADVERTISEMENT

ಮಳೆ ಸಾಧ್ಯತೆ:ಇದೇ ಮಂಗಳವಾರದಿಂದ ಭಾನುವಾರದವರೆಗೆ ಮಳೆ ಸುರಿಯುವ ಮುನ್ಸೂಚನೆಯನ್ನುಹವಾಮಾನ ಇಲಾಖೆ ನೀಡಿದೆ. ಇದು ಕಾಳ್ಗಿಚ್ಚು ವ್ಯಾಪಿಸಿದ ಪ್ರದೇಶಗಳ ಜನರಿಗೆ ತುಸು ನೆಮ್ಮದಿ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.